ವಿಜಯಪುರ ತಾಲೂಕು ಕೇಂದ್ರಗಳಲ್ಲಿ ವ್ಯಾಪಾರಕ್ಕೆ ಗ್ರೀನ್ ಸಿಗ್ನಲ್

403

ವಿಜಯಪುರ: ಗುಮ್ಮಟನಗರಿ ಆರೇಂಜ್ ಝೋನ್ ಗೆ ಬರುತ್ತಿದ್ದು, ಅದಕ್ಕಾಗಿ ತಾಲೂಕು ಕೇಂದ್ರಗಳಲ್ಲಿ ವ್ಯವಹಾರ ಮಾಡಲು ಅನುಮತಿ ನೀಡಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ವಿಜಯಪುರದಲ್ಲಿಂದು ಮಾತನಾಡಿದ ಅವರು, ಮೇ 3ರ ಬಳಿಕ ವಿಜಯಪುರ ನಗರ ಹೊರತು ಪಡಿಸಿ, ಉಳಿದ ಕಡೆಗೆ ವ್ಯಾಪಾರ ವಹಿವಾಟು ನಡೆಸಲಾಗುವುದು. ಅಲ್ಲದೇ, ಜಿಲ್ಲೆಯಲ್ಲಿರುವ ನಾಲ್ಕು ಕಂಟೇನ್ಮೆಂಟ್ ಝೋನ್ ಹಾಗೆ ಮುಂದುವರೆಸಲಾಗಿದೆ ಎಂದರು.

ಇನ್ನು ಹೊರ ಜಿಲ್ಲೆಗಳಿಂದ ಬರುವಂತವರು ಹೆಲ್ತ್ ಸರ್ಟಿಫಿಕೇಟ್ ತರಬೇಕು. ಅಲ್ಲದೇ, ಇಂಡಿ, ನಾಗಠಾಣ  ಮತಕ್ಷೇತ್ರಗಳು ಮಹಾರಾಷ್ಟ್ರದ ಗಡಿಯಲ್ಲಿ ಬರುವುದರಿಂದ ಆ ಭಾಗದ ಶಾಸಕರು ನಿರ್ಣಯದ ಅನುಗುಣವಾಗಿ ವ್ಯಾಪಾರ ವಹಿವಾಟಕ್ಕೆ ಅನುಮತಿ ಕೊಡಲಾಗುವುದು. ಅಲ್ದೇ, ಬೈಕ್, ಕಾರ್ ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಓಡಾಡಬೇಕು ಎಂದು ತಿಳಿಸಿದ್ದಾರೆ.

ಈ ವೇಳೆ ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ, ವಿಧಾನಪರಿಷತ್ ಸದಸ್ಯ ಅರುಣ ಶಹಾಪೂರ, ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ, ಜಿಲ್ಲಾ ಪಂಚಾಯ್ತಿ ಸಿಇಓ ಗೋವಿಂದ ರೆಡ್ಡಿ, ಪೊಲೀಸ್ ವರಿಷ್ಠಾಧಿಕಾರಿ ಅನುಮಪ ಅಗರ್ವಾಲ್, ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ರು.




Leave a Reply

Your email address will not be published. Required fields are marked *

error: Content is protected !!