ಕೊಹ್ಲಿ ದಾಖಲೆಯ ಶತಕ.. ಶ್ರೀಲಂಕಾಗೆ 374 ರನ್ ಟಾರ್ಗೆಟ್

127

ಪ್ರಜಾಸ್ತ್ರ ಸುದ್ದಿ

ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸಮನ್ ಗಳು ಭರ್ಜರಿಯಾಗಿ ಆಟವಾಡಿದ್ದಾರೆ. ಕಿಂಗ್ ಕೊಹ್ಲಿ 113 ರನ್ ಬಾರಿಸುವ ಮೂಲಕ ಏಕದಿನ ಕ್ರಿಕೆಟ್ ಪಂದ್ಯದಲ್ಲಿ 45 ಶತಕ ದಾಖಲಿಸಿದ್ದಾರೆ. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಗಳದಲ್ಲಿ 73ನೇ ಶತಕವಾಗಿದೆ.

ಸಚಿನ್ ತಂಡೂಲ್ಕರ್ 164 ಪಂದ್ಯಗಳಲ್ಲಿ 20 ಶತಕ ಬಾರಿಸಿದರೆ ಕೊಹ್ಲಿ 101 ಪಂದ್ಯಗಳಲ್ಲಿ ಬಾರಿಸುವ ಮೂಲಕ ದಾಖಲೆ ಬರೆದಿದ್ದಾರೆ. ಇನ್ನು ಶ್ರೀಲಂಕಾ ವಿರುದ್ಧ ಸಚಿನ್ 8 ಶತಕ ಬಾರಿಸಿದರೆ ಕೊಹ್ಲಿ 9 ಶತಕ ಬಾರಿಸಿ ಮತ್ತೊಂದು ದಾಖಲೆ ಮಾಡಿದರು. ಸಚಿನ್ 49 ಶತಕಗಳನ್ನು ಬಾರಿಸಿದ್ದು ಇದನ್ನು ಸರಿಗಟ್ಟಲು ಇನ್ನು 5 ಶತಕಗಳು ಕೊಹ್ಲಿಗೆ ಬೇಕಿವೆ.

ಇನ್ನು ನಾಯಕ ರೋಹಿತ್ ಶರ್ಮಾ 83, ಗಿಲ್ 70 ರನ್ ಬಾರಿಸಿ ಮಿಂಚಿದರು. ಅಯ್ಯರ್ 28, ಕೆ.ಎಲ್ ರಾಹುಲ್ 39, ಪಾಂಡ್ಯ 14, ಅಕ್ಷರ್ ಪಟೇಲ್ 9 ರನ್ ಗಳಿಸಿ ಔಟ್ ಆದರು. ಶಮಿ 4, ಸಿರಾಜ್ 7 ರನ್ ಗಳಿಸಿದರು. ಇದರೊಂದಿಗೆ ಭಾರತ 7 ವಿಕೆಟ್ ನಷ್ಟಕ್ಕೆ 373 ರನ್ ಗಳಿಸಿತು.




Leave a Reply

Your email address will not be published. Required fields are marked *

error: Content is protected !!