ಪ್ರಜಾಸ್ತ್ರ ಕ್ರೀಡಾ ಸುದ್ದಿ
ಕ್ರಿಕೆಟ್ ಜಗತ್ತಿನಲ್ಲಿ ಅತ್ಯುನ್ನತ ದಾಖಲೆಗಳನ್ನು ಮಾಡುತ್ತಿರುವ, ಕೋಟ್ಯಾಂತರ ಅಭಿಮಾನಿಗಳ ನೆಚ್ಚಿನ ಆಟಗಾರ ಅಂದರೆ ವಿರಾಟ್ ಕೊಹ್ಲಿ. ಆತನ ಅಬ್ಬರದ ಆಟದಿಂದಾಗಿಯೇ ಕಿಂಗ್ ಕೊಹ್ಲಿ ಅನ್ನೋ ಖ್ಯಾತಿ ಗಳಿಸಿದ್ದಾರೆ. ಇಂಥಾ ಕೊಹ್ಲಿ ಇನ್ಸ್ಟಾಗ್ರಾಮ್ ನಲ್ಲಿ ಬರೋಬ್ಬರಿ 250 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
ಈ ಮಟ್ಟದ ಫಾಲೋವರ್ಸ್ ಹೊಂದಿರುವ ವಿಶ್ವದ ಮೂರನೇ ಆಟಗಾರ ಅನ್ನೋ ಖ್ಯಾತಿಗಳಿಸಿದ್ದಾರೆ. 250 ಮಿಲಿಯನ್ ಅಂದರೆ 25 ಕೋಟಿ ಹಿಂಬಾಲಕರನ್ನು ಕೊಹ್ಲಿ ಹೊಂದಿದ್ದಾರೆ. ಫುಟ್ಬಾಲ್ ದಿಗ್ಗಜರಾದ ಕ್ರಿಸ್ಟಿಯಾನೋ ರೊನಾಲ್ಡೋ 585 ಮಿಲಯನ್ ಹಾಗೂ ಲಿಯೋನಲ್ ಮೆಸ್ಸಿ 464 ಮಿಲಿಯನ್ ಫಾಲೋವರ್ಸ್ ಹೊಂದುವ ಮೂಲಕ ಮೊದಲ ಎರಡು ಸ್ಥಾನಗಳಲ್ಲಿದ್ದಾರೆ.

ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್ ಧೋನಿ 42.4 ಮಿಲಿಯನ್ ಹಾಗೂ ಸಚಿನ್ ತಂಡೂಲ್ಕರ್ 40.4 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.