ಇಲ್ಲಿ 1 ದಿನ ಕಳೆಯಲು 58 ಲಕ್ಷ ರೂಪಾಯಿ

273

ಪ್ರಜಾಸ್ತ್ರ ಸುದ್ದಿ

ಪ್ರವಾಸ ಅಂದ್ರೆ ಪ್ರತಿಯೊಬ್ಬರಿಗೂ ಖುಷಿ. ಸುಂದರ ತಾಣಗಳನ್ನ ನೋಡುತ್ತಾ ಒಂದಿಷ್ಟು ಕಾಲ ಹಾಯಾಗಿರಬೇಕು ಅಂದುಕೊಳ್ಳುತ್ತಾರೆ. ಅವರವರ ಬಜೆಟ್ ಮೇಲೆ ಕೆಲವೊಮ್ಮೆ ಪ್ರವಾಸಗಳು ನಿರ್ಧಾರವಾಗುತ್ತವೆ. ಕೋಟಿ ಕೋಟಿ ದುಡ್ಡು ಇರುವವರಿಗೆ ಈ ಜಾಗದ ಬಾಡಿಗೆ ದೊಡ್ಡ ಮೊತ್ತವೇ ಅನಿಸುವುದಿಲ್ಲ. ಅದವೇ ಮಾಲ್ಡೀವ್ಸ್.

ಮಾಲ್ಡೀವ್ಸ್ ಐಷಾರಾಮಿ ಇರುವ ದ್ವೀಪ. ಸಿನಿಮಾ ನಟ, ನಟಿಯರ, ಸ್ಟಾರ್ ಕ್ರೀಡಾಪಟುಗಳ, ರಾಜಕಾರಣಿಗಳ ನೆಚ್ಚಿನ ತಾಣ. ಹೀಗಾಗಿ ಅವರು ಇಲ್ಲಿಗೆ ಭೇಟಿ ನೀಡುತ್ತಲೇ ಇರ್ತಾರೆ. ವಾಲ್ಡ್ ರೋಫ್ ಆಸ್ಟೋರಿಯಾ ಮಾಲ್ಡೀವ್ಸ್ ಇಥಾಪುಶಿಯಾ ಖಾಸಗಿ ಅತ್ಯಂತ ದುಬಾರಿ.

3 ರೂಮಿಗಳಿರುವ ಬೀಚ್ ವಿಲ್ಲಾ, ಎರಡು ರೂಮ್ ಗಳ ಓವರ್ ವಾಟರ್ ವಿಲ್ಲಾ, ನಾಲ್ಕ್ ಬೆಡ್ ರೂಮ್ ಮನೆ, 5 ಸ್ವಿಮ್ಮಿಂಗ್ ಪೂಲ್ ಹಾಗೂ ಒಂದು ಕ್ಲಬ್ ಹೌಸ್ ಇದೆ. ಇದರ ಜೊತೆಗೆ ಪ್ರಾಣಾಯಾಮ ಕೇಂದ್ರ, ಯೋಗಾ ಕೇಂದ್ರ, ಮಕ್ಕಳ ಸ್ವಿಮ್ಮಿಂಗ್ ಪೂಲ್ ಸೇರಿದಂತೆ ಅತ್ಯಂತ ಐಷಾರಾಮಿ ಲೈಫ್ ಸ್ಟೈಲ್ ಇಲ್ಲಿದೆ. ಆದ್ರೆ, ಇಲ್ಲಿ ಒಂದು ದಿನಕ್ಕೆ ಬರೋಬ್ಬರಿ 58 ಲಕ್ಷ ರೂಪಾಯಿ ಕೊಡಬೇಕು. ಹೀಗಾಗಿ ಇದು ಅತಿ ದುಬಾರಿ ಟ್ರಿಪ್ ಆಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ.




Leave a Reply

Your email address will not be published. Required fields are marked *

error: Content is protected !!