94 ಲಕ್ಷಕ್ಕೆ ಮಾರಾಟವಾದ ಈ ಜೀನ್ಸ್ ವಿಶೇಷತೆ ಏನು?

230

ಪ್ರಜಾಸ್ತ್ರ ಲೈಫ್ ಸ್ಟೈಲ್

ಜೀನ್ಸ್ ಪ್ಯಾಂಟ್ ಬೆಲೆ ನೂರಾರು ರೂಪಾಯಿಯಿಂದ ಸಾವಿರಾರು ರೂಪಾಯಿ ತನಕ ಇರುತ್ತವೆ. ವಿಐಪಿ, ವಿವಿಐಪಿಗಳು ಬ್ಯಾಂಡ್ ಜೀನ್ಸ್ ಪ್ಯಾಂಟ್ ಹಾಕಿದರೂ ಲಕ್ಷ ತನಕ ಬರುವುದಿಲ್ಲ. ಆದರೆ, ಇಲ್ಲೊಂದು ಜೀನ್ಸ್ ಪ್ಯಾಂಟ್ ಬರೋಬ್ಬರಿ 94 ಲಕ್ಷ ರೂಪಾಯಿ ಮಾರಾಟವಾಗಿದೆ.

ಈ ಜೀನ್ಸ್ ಪ್ಯಾಂಟ್ ವಿಶ್ವದ ಅತ್ಯಂತ ಹಳೆಯ ಪ್ಯಾಂಟ್ ಅಂತೆ. 1857ರಲ್ಲಿ ಮುಳುಗಿದ ಹಡಗಿನಲ್ಲಿ ಇದು ಪತ್ತೆಯಾಗಿದೆ. ಅಮೆರಿಕಾದ ಉತ್ತರ ಕೆರೊಲಿನಾ ರಾಜ್ಯದಲ್ಲಿ ಪತ್ತೆಯಾದ ಹಡಗಿನ ಅವಶೇಷದಲ್ಲಿ ಬಿಳಿ ಮೈನರ್ಸ್ ಬಣ್ಣದ 5 ಬಟನ್ ಗಳಿರುವ ಜೀನ್ಸ್ ಪ್ಯಾಂಟ್ ಪತ್ತೆಯಾಗಿದೆ.

ಸ್ಯಾನ್ ಫ್ರಾನ್ಸಿಸ್ಕೋದಿಂದ ಪನಾಮ ಮೂಲಕ ನ್ಯೂಯಾರ್ಕ್ ಗೆ ತೆರಳುತ್ತಿದ್ದ ಹಡಗು ಸೆಪ್ಟೆಂಬರ್ 12, 1857ರಲ್ಲಿ ಚಂಡಮಾರುತಕ್ಕೆ ಸಿಕ್ಕು ಮುಳುಗಿತು. ಆ ಹಡಗಿನ ಅವಶೇಷದಲ್ಲಿ ಸಿಕ್ಕಿ ಜೀನ್ಸ್ ಪ್ಯಾಂಟ್ ಹರಾಜಿನಲ್ಲಿ 94 ಲಕ್ಷ ರೂಪಾಯಿಗೆ ಮಾರಾಟವಾಗಿದೆ.

ಲೆವಿ ಸ್ಟ್ರಾಸ್ & ಕಂ ಈ ಜೀನ್ಸ್ ತಯಾರಿಸಿರಬಹುದು ಎನ್ನಲಾಗುತ್ತಿದೆ. ಆದರೆ, ಲೆವಿ ಸ್ಟ್ರಾಸ್ ಕಂಪನಿ ಜೀನ್ಸ್ ತಯಾರಿಸಿದ್ದು 1873ರಲ್ಲಿ. ಈ ಕಂಪನಿ ಮೊದಲು ಒಣ ವಸ್ತುಗಳ ದೊಡ್ಡ ಸಗಟು ವ್ಯಾಪಾರ ನಡೆಸಿತಿತ್ತು. ಇದು ಮೊದಲ ಆವೃತ್ತಿಯ ಜೀನ್ಸ್ ಆಗಿರಬಹುದು ಎನ್ನಲಾಗುತ್ತಿದೆ. ಆದರೆ, ಇದೆಲ್ಲ ಊಹಾಪೋಹ ಅನ್ನೋದು ಕಂಪನಿಗೆ ಸಂಬಂಧಿಸಿದವರ ಮಾತು.




Leave a Reply

Your email address will not be published. Required fields are marked *

error: Content is protected !!