ವಿದೇಶಿ ಕಂಪನಿ ಎಲಾರ ಯಾರ ಕಂಟ್ರೋಲ್ ನಲ್ಲಿದೆ?: ರಾಹುಲ್ ಗಾಂಧಿ

54

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಲಂಡನ್ ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿ, ಕ್ಷಮೆ ಕೇಳಬೇಕೆಂದು ಸಂಸತ್ ನಲ್ಲಿ ಪಟ್ಟು ಹಿಡಿಯಲಾಗಿದೆ. ಇದರ ನಡುವೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದು, ವಿದೇಶಿ ಕಂಪನಿ ಎಲಾರ ಯಾರ ನಿಯಂತ್ರಣದಲ್ಲಿದೆ ಎಂದು ಪ್ರಶ್ನಿಸಿದ್ದಾರೆ.

ಕ್ಷಿಪಣಿ ಹಾಗೂ ರಾಡಾರ್ ನವೀಕರಣದ ಗುತ್ತಿಗೆಯನ್ನು ವಿದೇಶದ ಸಂಶಯಾಸ್ಪದ ಎಲಾರ ಸಂಸ್ಥೆ ಹಾಗೂ ಅದಾನಿ ಗ್ರೂಫ್ ಗೆ ನೀಡಲಾಗಿದೆ. ದೇಶದ ಭದ್ರತಾ ಸಾಧನಗಳ ನಿಯಂತ್ರಣವನ್ನು ಅಜ್ಞಾತ ವಿದೇಶ ಕಂಪನಿಗೆ ನೀಡಿ ದೇಶದ ಭದ್ರತೆಯಲ್ಲಿ ರಾಜಿ ಮಾಡಿಕೊಳ್ಳಲಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.

ಮೋದಿ ಹಾಗೂ ಬಿಜೆಪಿ ನಾಯಕರ ವಿರುದ್ಧ ಪ್ರತ್ಯಸ್ತ್ರ ಬಳಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಚೀನಾಕ್ಕೆ ಹೋಗಿ ನೀವು ಆಡಿದ ಮಾತುಗಳನ್ನು ನಿಮಗೆ ನೆನಪಿಸುತ್ತೇನೆ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಯಾವುದೇ ತಪ್ಪು ಮಾತನಾಡಿಲ್ಲ. ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿದ್ದಾರೆ ಎಂದಿದ್ದಾರೆ.
Leave a Reply

Your email address will not be published. Required fields are marked *

error: Content is protected !!