ಉತ್ತರ ಕರ್ನಾಟಕದಲ್ಲಿ ಇನ್ನು ಹೆಚ್ಚಾಗಲಿದೆ ಚಳಿ

152

ಪ್ರಜಾಸ್ತ್ರ ಸುದ್ದಿ

ಧಾರವಾಡ: ಈಗಾಗ್ಲೇ ಅತಿಯಾದ ಮಳೆಯಿಂದಾಗಿ ಜನರು ಸಾಕಷ್ಟು ಹೈರಾಣಾಗಿದ್ದಾರೆ. ಈಗ ಚಳಿ ಶುರುವಾಗಿದೆ. ಮೈಕೊರೆಯುವ ಚಳಿಗೆ ಉತ್ತರ ಕರ್ನಾಟಕ ಭಾಗದ ಜನರು ತತ್ತರಿಸಲಿದ್ದಾರೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಹವಾಮಾನ ಮುನ್ಸೂಚನಾ ಕೇಂದ್ರದಿಂದಲೂ ಈ ಬಗ್ಗೆ ಮಾಹಿತಿ ನೀಡಿದ್ದು, ಡಿಸೆಂಬರ್ 3ನೇ ವಾರದ ಬಳಿಕ ಹೆಚ್ಚಾಗಬೇಕಿದ್ದ ಚಳಿ ನವೆಂಬರ್ 24ರ ಬಳಿಕ ಹೆಚ್ಚಾಗಲಿದೆ. ಡಿಸೆಂಬರ್ ನಲ್ಲಿ ಮತ್ತಷ್ಟು ಚಳಿ ಹೆಚ್ಚಾಗಲಿದೆ ಎಂದು ಡಾ.ಆರ್.ಎಚ್ ಪಾಟೀಲ ತಿಳಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ, ಗದಗ, ಹಾವೇರಿ, ಬೆಳಗಾವಿ, ಕೊಪ್ಪಳ, ರಾಯಚೂರು ಭಾಗದಲ್ಲಿ ಮೈಕೊರೆಯವ ಚಳಿ ಜನರನ್ನು ಕಾಡಲಿದೆ ಎಂದು ತಿಳಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!