17 ಗಂಡಂದಿರನ್ನು ಕೊಂದ 20 ವರ್ಷದ ಮಹಿಳೆ!

156

ಪ್ರಜಾಸ್ತ್ರ ಸುದ್ದಿ

ಪಂಜಾಬ್: ಈ ಸ್ಟೋರಿ ನಿಜಕ್ಕೂ ನಂಬಲು ಕಷ್ಟಸಾಧ್ಯ. ಆದರೆ, ನಂಬಲೇಬೇಕು. ಯಾಕಂದರೆ ಸತ್ಯ ಯಾವತ್ತಿದ್ದರೂ ಸತ್ಯವೇ. ಇಲ್ಲೊಬ್ಬಳು ತನ್ನ 20ನೇ ವಯಸ್ಸಿನಲ್ಲಯೇ ಬರೋಬ್ಬರಿ 17 ಮಂದಿಯನ್ನು ಮದುವೆಯಾಗಿದ್ದಾಳೆ. ಅವರೆಲ್ಲರನ್ನೂ ಕೊಂದಿದ್ದಾಳೆ. ನಿಜಕ್ಕೂ ಇದೊಂದು ಕ್ರೈಂ ಥ್ರಿಲ್ಲರ್ ಸಿನಿಮಾ ರೀತಿಯಿದೆ.

ಲಾಲ್ ವಾನ್ ಅನ್ನೋ 20 ವರ್ಷದ ಮಹಿಳೆ ಮೊದಲ ಮದುವೆಯಾಗಿದ್ದಾಗ 14 ವರ್ಷ. ಆರಂಭದ ಕೆಲ ತಿಂಗಳು ಪತಿಯೊಂದಿಗೆ ಸಂತೋಷದಿಂದ ಜೀವನ ಕಳೆದಿದ್ದಾಳೆ. ಇದರ ನಡುವೆ ಆಕೆಗೆ ಬೇರೊಬ್ಬನ ಮೇಲೆ ಮನಸ್ಸಾಗಿದೆ. ಹೀಗಾಗಿ ಪತಿಯಿಂದ ದೂರುವಿರಲು ಪ್ರಯತ್ನಿಸಿದ್ದಾಳೆ. ಕೆಲ ದಿನಗಳ ಬಳಿಕ ಪತಿಯ ಸಾವಿನ ಸುದ್ದಿ ಬಂದಿದೆ. ಆದರೆ, ಇದು ಲಾಲ್ ವಾನ್ ಮಾಡಿದ ಪೂರ್ವನಿಯೋಜಿತ ಸಂಚು.

ಚಿಕ್ಕ ವಯಸ್ಸಿಗೆ ವಿಧುವೆಯಾದಳೆಂದು 2ನೇ ಮದುವೆ ಮಾಡಿದ್ದಾರೆ. ಆತನು ಮೃತಪಟ್ಟಿದ್ದಾನೆ. ಹೀಗೆ ಸಾಲು ಸಾಲು 16 ಗಂಡಂದಿರನ್ನು ಹತ್ಯೆ ಮಾಡಿದ್ದಾಳೆ. ಇದು ಯಾರಿಗೂ ತಿಳಿಯದೆ ಹೋಗಿರುವುದು ದುರಂತ. ನಂತರ ಪೊಲೀಸರು ಆಕೆಯ ಮೇಲೆ ನಿಗಾ ವಹಿಸಿದ್ದಾರೆ. ಆದರೂ 17ನೇ ಗಂಡನ ಕೊಲೆ ತಪ್ಪಿಸಲು ಆಗಿಲ್ಲ. ಮೃತದೇಹವನ್ನು ವಶಕ್ಕೆ ಪಡೆದು ಲಾಲ್ ಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆಹಾರದಲ್ಲಿ ವಿಷ ಹಾಕಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಕೇವಲ 20ನೇ ವಯಸ್ಸಿನಲ್ಲಿಯೇ 17 ಅಮಾಯಕ ಜೀವಗಳನ್ನು ಬಲಿ ಪಡೆದಿರುವುದು ಎಲ್ಲರನ್ನು ಬೆಚ್ಚಿ ಬೀಳಿಸಿದೆ.




Leave a Reply

Your email address will not be published. Required fields are marked *

error: Content is protected !!