ನೀರಜ್ ಚೋಪ್ರಾ ಮತ್ತೊಂದು ಐತಿಹಾಸಿಕ ಸಾಧನೆ

304

ಪ್ರಜಾಸ್ತ್ರ ಕ್ರೀಡಾ ಸುದ್ದಿ

ವರ್ಲ್ಡ್ ಅಥ್ಲಟಿಕ್ ಚಾಂಪಿಯನಶಿಪ್ ನಲ್ಲಿ ಜಾವ್ ಲೀನ್ ನಲ್ಲಿ ಭಾರತದ ನೀರಜ್ ಚೋಪ್ರಾ ಬೆಳ್ಳಿ ಗೆಲ್ಲುವ ಮೂಲಕ ಮತ್ತೊಂದು ಐತಿಹಾಸಕ ಸಾಧನೆ ಮಾಡಿದ್ದಾರೆ. ನಾಲ್ಕನೇ ಪ್ರಯತ್ನದಲ್ಲಿ 88.13 ಮೀಟರ್ ದೂರವನ್ನು ಭರ್ಜಿ ಎಸೆದಿದ್ದಾರೆ. ಈ ಮೂಲಕ ಸಿಲ್ವರ್ ಮೆಡಲ್ ತಮ್ಮದಾಗಿಸಿಕೊಂಡಿದ್ದಾರೆ.

2003ರಲ್ಲಿ ಲಾಂಗ್ ಜಂಪಿನಲ್ಲಿ ಅಂಜು ಬಾಬಿ ಜಾರ್ಜ್ ಕಂಚು ಗೆಲ್ಲುವ ಮೂಲಕ ವರ್ಲ್ಡ್ ಅಥ್ಲಟಿಕ್ ಚಾಂಪಿಯನಶಿಪ್ ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟವರು. ಇದೀಗ ನೀರಜ್ ಚೋಪ್ರಾ ಎರಡನೇ ಹಾಗೂ ಮೊದಲ ಬೆಳ್ಳಿ ಪದಕ ತಂದು ಕೊಟ್ಟಿದ್ದಾರೆ.

ಗ್ರೇಂಡಾದ ಆಂಡರ್ಸನ್ ಪೀಟರ್ 90.54 ಮೀಟರ್ ಎಸೆಯುವ ಮೂಲಕ ಬಂಗಾರ, ಜಾಕಬ್ ವದ್ಲೇಚ್ 88.09 ಮೀಟರ್ ಎಸೆಯುವ ಮೂಲಕ ಕಂಚು ತಮ್ಮದಾಗಿಸಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!