‘ರೋರಾ’, ಬೂಮ್ರಾ ವಿಶ್ವ ದಾಖಲೆ

565

ಲಂಡನ್: ಲಂಡನ್ ನಲ್ಲಿ ನಡೆಯುತ್ತಿರುವ ವರ್ಲ್ಡ್ ಕಪ್ ನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಭಾರತದ ಮೂವರು ಆಟಗಾರರು ವಿಶ್ವ ದಾಖಲೆ ಮಾಡಿದ್ದಾರೆ.

ಲಂಡನ್ ನಲ್ಲಿ ನಡೆಯುತ್ತಿರುವ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಶತಕ ಸಿಡಿಸುವ ಮೂಲಕ ರೋಹಿತ ಶರ್ಮಾ ಮೂರು ದಾಖಲೆಗಳನ್ನ ಮುರಿದಿದ್ದಾರೆ. 94 ಎಸೆತಗಳಲ್ಲಿ ಭರ್ಜರಿಯಾಗಿ 104 ರನ್ ಗಳಿಸಿದ್ದಾರೆ. ಇದರಲ್ಲಿ 14 ಫೋರ್ ಹಾಗೂ ಎರಡು ಸಿಕ್ಸ್ ಸೇರಿವೆ.

2015ರ ವಿಶ್ವಕಪ್ ನಲ್ಲಿ ನಾಲ್ಕು ಶತಕ ಸಿಡಿಸಿದ ಶ್ರೀಲಂಕಾದ ಕುಮಾರ ಸಂಗಾಕರ್ ಹೆಸರಿನಲ್ಲಿದ್ದ ದಾಖಲೆಯನ್ನ ರೋಹಿತ ಶರ್ಮಾ ಮುರಿದಿದ್ದಾರೆ. 2019ರ ವರ್ಲ್ಡ್ ಕಪ್ ನಲ್ಲಿ ರೋಹಿತ 5 ಶತಕಗಳನ್ನ ದಾಖಲಿಸಿದ್ದಾರೆ. ಈ ಮೂಲಕ ವಿಶ್ವ ದಾಖಲೆಯನ್ನ ತಮ್ಮ ಹೆಸರಿಗೆ ಬರೆದುಕೊಂಡರು.

ಸಚಿನ ತಂಡೂಲ್ಕರ್ ವಿಶ್ವಕಪ್ ಟೂರ್ನಿಯಲ್ಲಿ ಬರೋಬ್ಬರಿ 673 ರನ್ ಬಾರಿಸಿ ಮೊದಲ ಸ್ಥಾನದಲ್ಲಿದ್ದಾರೆ. ಲೀಗ್ ಹಂತದಲ್ಲಿ ಬಾರಿಸಿದ್ದ 586 ರನ್ ಗಳ ದಾಖಲೆಯನ್ನ ನಿನ್ನೆ ಶಕೀಬ್ ಅಲ್ ಹಸನ್ ಪಾಕ್ ವಿರುದ್ಧ 606ರನ್ ಗಳಿಸುವ ಮೂಲಕ ಬ್ರೇಕ್ ಮಾಡಿದ್ರು. ಈ ದಾಖಲೆಯನ್ನ ಇದೀಗ ರೋಹಿತ ಶರ್ಮಾ ಮುರಿದಿದ್ದಾರೆ. 648 ರನ್ ಬಾರಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ಇನ್ನು ಕನ್ನಡಿಗ ಕೆ.ಎಲ್ ರಾಹುಲ್ ವರ್ಲ್ಡ್ ಕಪ್ ನಲ್ಲಿ ಮೊದಲ ಶತಕ ದಾಖಲಿಸಿದ್ರು. ಈ ಮೂಲಕ ಕೆ.ಎಲ್ ರಾಹುಲ್ ಶತಕದ ಸವಿಯನ್ನ ವರ್ಲ್ಡ್ ಕಪ್ ನಲ್ಲಿ ಅನುಭವಿಸಿದ್ರು.

ಇನ್ನೊಂದು ಕಡೆ ಬೂಮ್ರಾ ವೇಗವಾಗಿ 100 ವಿಕೆಟ್ ಪಡೆಯುವ ಮೂಲಕ ಜಾವಗಲ್ ಶ್ರೀನಾಥ (68 ಪಂದ್ಯ) ಇರ್ಫಾನ್ ಪಠಾಣ್(69 ಪಂದ್ಯ) ದಾಖಲೆಯನ್ನ ಮುರಿದ್ರು. ಜಸ್ ಪ್ರಿತ್ ಬೂಮ್ರಾ 67 ಪಂದ್ಯಗಳಲ್ಲಿ 100 ವಿಕೆಟ್ ಪಡೆದು ದಾಖಲೆಯನ್ನ ಬರೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!