ಸೆಮಿಫೈನಲ್ ಗೆ ಮಳೆ ಎಂಟ್ರಿ! ಫೈನಲ್ ಗೆ ಯಾರು?

404

ಲಂಡನ್: ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಾಳೆ ನಡೆಯುವ ಪಂದ್ಯಕ್ಕೆ ಮಳೆಯ ಕಾಟವಿದೆ ಎನ್ನಲಾಗ್ತಿದೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳಲ್ಲಿ ಮತ್ತಷ್ಟು ಟೆನ್ಷನ್ ಗೆ ಕಾರಣವಾಗಿದೆ. ಲೀಗ್ ಹಂತದಲ್ಲಿಯೂ ಸಹ ಮಳೆಯಿಂದಾಗಿ ಭಾರತ ಹಾಗೂ ನ್ಯೂಜಿಲೆಂಡ್ ಪಂದ್ಯ ರದ್ದಾಗಿತ್ತು.

ಮಂಗಳವಾರದ ಹವಾಮಾನದ ಚಿತ್ರಣ

ಜುಲೈ 9ರ ಹವಾಮಾನ ವರದಿಯನ್ನ ಈಗಾಗ್ಲೇ ಹಲವಾರು ಜನ ಇಂಟರ್ ನೆಟ್ ನಲ್ಲಿ ಹುಡುಕಾಡಿದ್ದಾರೆ. ಹವಾಮಾನ ವರದಿ ಪ್ರಕಾರ ಮಂಗಳವಾರ ಮಳೆಯಾಗುವ ಸಾಧ್ಯತೆಯಿದೆ. ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 11ರಿಂದ 12ಗಂಟೆಯ ತನಕ ಮಳೆಯಾಗುವ ಲಕ್ಷಣವಿದೆ. ಮಧ್ಯಾಹ್ನ 1ರಿಂದ 4ರ ತನಕ ದಟ್ಟಮೋಡ ಹಾಗೂ ಸಂಜೆ 6ರಿಂದ 7ರ ತನಕ ಮತ್ತೆ ಮಳೆಯಾಗುವ ಸಾಧ್ಯತೆಯಿದೆ.

ಒಂದು ವೇಳೆ ನಾಳೆ ಮಳೆಯಿಂದ ಪಂದ್ಯ ರದ್ದುಗೊಂಡ್ರೆ ಬುಧವಾರ ಪಂದ್ಯ ಆಡಿಸಲು ಅವಕಾಶವಿದೆ. ಅಂದು ಸಹ ಮಳೆ ಬರುವ ಸಾಧ್ಯತೆಯಿದೆ. ನಾಳೆಯ ಪಂದ್ಯದಲ್ಲಿ ಮಳೆ ಅರ್ಧ ಬಂದು ನಿಂತರೆ, ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಓವರ್ ಹಾಗೂ ಬಾರಿಸಬೇಕಾದ ರನ್ ಗಳ ಮಿತಿ ಹೇಳಲಾಗುತ್ತೆ. ಹೀಗಾಗಿ ಟಾಸ್ ಗೆದ್ದು ಮೊದ್ಲು ಬ್ಯಾಟಿಂಗ್ ತೆಗೆದುಕೊಳ್ಳುವುದು ಬೆಸ್ಟ್.

2019ರ ವರ್ಲ್ಡ್ ಕಪ್ ಪಾಯಿಂಟ್ ಪಟ್ಟಿ

ಫೈನಲ್ ಗೆ ಭಾರತ

ಒಂದು ಮಳೆಯಿಂದಾಗಿ ಪಂದ್ಯ ರದ್ದಾದ್ರೆ ಭಾರತ ಸೀದಾ ಫೈನಲ್ ತಲುಪಲಿದೆ. ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತಕ್ಕೆ ಇದು ವರವಾಗುವ ಸಾಧ್ಯತೆಯಿದೆ. ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಟೂರ್ನಿಯಿಂದ ಹೊರಬೀಳಲಿದೆ. ಇದ್ರಿಂದಾಗಿ ಇಂಡಿಯನ್ ಕ್ರಿಕೆಟ್ ಅಭಿಮಾನಿಗಳಿಗೆ ಡಬಲ್ ಟೆನ್ಷನ್ ಶುರುವಾಗಿದೆ.




Leave a Reply

Your email address will not be published. Required fields are marked *

error: Content is protected !!