ಇಂದು ಆರ್ ಸಿಬಿ ಸೋಲಿನ ಕೊಂಡಿ ಕಳಚುತ್ತಾ?

55

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಭರವಸೆ ಮೂಡಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಗ್ಗರಿಸಿದೆ. ಸ್ಮೃತಿ ಮಂದಾನ್ ನಾಯಕತ್ವದ ಟೀಂ ಆಡಿರುವ 5 ಪಂದ್ಯಗಳಲ್ಲಿ ಸೋತು ಸುಣ್ಣವಾಗಿದೆ. ಇಂದು ಸಂಜೆ ನಡೆಯುವ ಯುಪಿ ವಾರಿಯರ್ಸ್ ವಿರುದ್ಧ ಗೆದ್ದು ಸೋಲಿನ ಕೊಂಡಿ ಕಳಚಿಕೊಳ್ಳುತ್ತಾ ಅನ್ನೋ ಕುತೂಹಲ ಮೂಡಿದೆ.

ಹಿಂದಿನ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಆರ್ ಸಿಬಿ ವಿರುದ್ಧ 10 ವಿಕೆಟ್ ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ. ಇದೀಗ ಎರಡನೇ ಬಾರಿಗೆ ಮುಖಾಮುಖಿ ಆಗುತ್ತಿದ್ದು, ಗೆಲುವಿನ ರುಚಿ ನೋಡಲು ಆಟಗಾರರು ಹಾಗೂ ಅಭಿಮಾನಿಗಳು ಕಾಯುತ್ತಿದ್ದಾರೆ.

ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ವೈಫಲ್ಯ ಕಾಣುತ್ತಿರುವ ಬೆಂಗಳೂರು ತಂಡಕ್ಕೆ ದೊಡ್ಡ ತಲೆ ನೋವಾಗಿದೆ. ಸ್ಟಾರ್ ಆಟಗಾರ್ತಿಯರು ಇದ್ದರೂ ಪಂದ್ಯ ಗೆಲ್ಲಲು ಆಗುತ್ತಿಲ್ಲ. ಹೀಗಾಗಿ ನಾಯಕಿ ಸ್ಮೃತಿ ಮಂದಾನ್ ಸೋಲಿನ ಹೊಣೆಯನ್ನು ತಾವೇ ಹೊತ್ತುಕೊಂಡಿದ್ದಾರೆ. ಇಂದಿನ ಪಂದ್ಯದಲ್ಲಿಯಾದರೂ ಗೆದ್ದು ಸೋಲಿನ ಹಣೆಪಟ್ಟಿ ಕಳಚಲಿ ಅನ್ನೋದು ಅಭಿಮಾನಿಗಳ ಆಸೆ.
Leave a Reply

Your email address will not be published. Required fields are marked *

error: Content is protected !!