ಉದ್ಘಾಟನಾ ಪಂದ್ಯ ಗೆದ್ದು ಬೀಗಿದ ಮುಂಬೈ

140

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಮುಂಬೈ: ಇದೆ ಮೊದಲ ಬಾರಿಗೆ ಆರಂಭವಾಗಿರುವ ಮಹಿಳಾ ಪ್ರೀಮಿಯರ್ ಲಿಗ್ ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ವಿರುದ್ಧ ಮುಂಬೈ ತಂಡ ಭರ್ಜರಿ ಗೆಲುವು ಸಾಧಿಸಿದೆ. ನಾಯಕಿ ಹರ್ಮನ್ ಪ್ರೀತ್ ಕೌರ್ ಬಳಗ 143 ರನ್ ಗಳ ಭಾರೀ ಅಂತರದಿಂದ ವಿಜಯ ಸಾಧಿಸಿದೆ.

ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್, ನಾಯಕಿ ಕೌರ್ 65 ರನ್, ಕಿವೀಸ್ ಆಟಗಾರ್ತಿ ಅಮೆಲಿಯಾ ಕೆರ್ರ್ 45 ರನ್, ಹ್ಯಾಲಿ ಮ್ಯಾಥ್ಯೂಸ್ 47 ರನ್ ಗಳ ಆಟದಿಂದಾಗಿ 5 ವಿಕೆಟ್ ನಷ್ಟಕ್ಕೆ 207 ರನ್ ಗಳ ಬೃಹತ್ ಸ್ಕೋರ್ ದಾಖಲಿಸಿತು. ನಂತರ ಬ್ಯಾಟಿಂಗ್ ನಡೆಸಿದ ಗುಜರಾತ್ ಟೀಂ 15.1 ಓವರ್ ಗಳಲ್ಲಿ 64 ರನ್ ಗಳಿಸಿ ಸೋಲು ಕಂಡಿತು.

ನವಿ ಮುಂಬೈನ ಡಾ.ಡಿ.ವೈ ಪಾಟೀಲ ಸ್ಫೋರ್ಟ್ಸ್ ಅಕಾಡೆಮಿ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ತಂಡ ರನ್ ಮಳೆ ಹರಿಸಿತು. ಆದರೆ ಬೆತ್ ಮೋನಿ ನಾಯಕತ್ವದ ಗುಜರಾತ್ ಜಯಂಟ್ಸ್ ಹೀನಾಯ ಸೋಲು ಅನುಭವಿಸಿತು. ಮುಂಬೈನ ನಾಯಕ ಹರ್ಮನ್ ಪ್ರೀತ್ ಕೌರ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.




Leave a Reply

Your email address will not be published. Required fields are marked *

error: Content is protected !!