ಲೇಖಕಿ ಸಾರಾ ಅಬೂಬಕರ್ ಕೋರ್ಟ್ ಮೆಟ್ಟಿಲು ಏರಿದ್ದೇಕೆ?

7375

ಮಂಗಳೂರು: ಖ್ಯಾತ ಲೇಖಕಿ ಸಾರಾ ಅಬೂಬಕರ್ ಅವರು 8 ವರ್ಷಗಳ ಹಿಂದೆ ಕೋರ್ಟ್ ಮೆಟ್ಟಿಲು ಏರಿದ್ರು. ಇದೀಗ ಅವರಿಗೆ ಜಯ ಸಿಕ್ಕಿದೆ. ಇದಕ್ಕೆ ಕಾರಣವಾಗಿರೋದು ಅವರ ‘ಚಂದ್ರಗಿರಿ ತೀರದಲ್ಲಿ’ ಅನ್ನೋ ಕಾದಂಬರಿ ಕೃತಿಚೌರ್ಯವಾಗಿರೋದು.

ಲೇಖಕಿ ಸಾರಾ ಅಬೂಬಕರ್ ಅವರ ಕಾದಂಬರಿ ‘ಚಂದ್ರಗಿರಿ ತೀರದಲ್ಲಿ’ ಕೃತಿಚೌರ್ಯವೆಸಗಿ ‘ಬ್ಯಾರಿ’ ಅನ್ನೋ ಮೊಟ್ಟ ಮೊದಲ ಬ್ಯಾರಿ ಭಾಷೆಯ ಚಿತ್ರ ನಿರ್ಮಾಣ ಮಾಡಲಾಗಿದೆ. ಹೀಗಾಗಿ 2011ರಲ್ಲಿ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರ ವಿರುದ್ಧ ನಾನು ಕೋರ್ಟ್ ಮೆಟ್ಟಿಲು ಏರಿದ್ದೆ. ಇದು ನನಗೆ ಅನಿವಾರ್ಯವಾಗಿತ್ತು ಅಂತಾ ಲೇಖಕಿ ಹೇಳಿದ್ದಾರೆ.

ಇದೀಗ ಮೂರನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶರಾಗಿರುವ ಮುರುಳೀಧರ ಪೈ.ಬಿ ಅವರು ತೀರ್ಪು ನೀಡಿದ್ದು, ಬ್ಯಾರಿ ಚಿತ್ರವನ್ನ ಸಾರ್ವಜನಿಕವಾಗಿ ಪ್ರದರ್ಶನ ಮಾಡದಂತೆ ಆದೇಶ ನೀಡಿದ್ದಾರೆ. ಇದರ ಜೊತೆಗೆ ಕೃತಿಚೌರ್ಯಕ್ಕಾಗಿ ಲೇಖಕಿಗೆ 2 ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶಿಸಿದ್ದಾರೆ. 8 ವರ್ಷ 12 ದಿನಗಳ ವಿಚಾರಣಾವಧಿಯ ಕಾಲದ ಬಡ್ಡಿಯನ್ನ, ಕೋರ್ಟ್ ವೆಚ್ಚವನ್ನ ಪಾವತಿಸುವುದಕ್ಕೆ ಆದೇಶ ನೀಡಲಾಗಿದೆ ಎಂದು ಲೇಖಕಿ ಸಾರಾ ಅಬೂಬಕರ್ ಅವರು ತಿಳಿಸಿದ್ದಾರೆ.

ಅಲ್ತಾಫ ಹುಸೈನ ಎಂಬುವವರು ಚಿತ್ರ ನಿರ್ಮಿಸಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ರು. ಸುವೀರನ್ ನಿರ್ದೇಶನ ಮಾಡಿದ್ರು. 59ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯಲ್ಲಿ ಬ್ಯಾರಿ ಸಿನಿಮಾಗೆ ಸ್ವರ್ಣಕಮಲ ಪ್ರಶಸ್ತಿ ಸಹ ಬಂದಿತ್ತು. ಆದ್ರೆ, ಈ ಚಿತ್ರ ನನ್ನ ಗಮನಕ್ಕೆ ಬಂದ್ಮೇಲೆ ಇದು ನನ್ನ ‘ಚಂದ್ರಗಿರಿ ತೀರದಲ್ಲಿ’ ಕಾದಂಬರಿ ಆಧರಿತ ಚಿತ್ರವಾಗಿದ್ದ ಕಾರಣಕ್ಕೆ 2011ರಲ್ಲಿ ಕೋರ್ಟ್ ಮೆಟ್ಟಿಲು ಏರಿದ್ದೆ. ಕೃತಿಚೌರ್ಯವಾಗಿರೋದು ಸಾಬೀತಾಗಿದೆ ಅಂತಾ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!