ಪ್ರಜಾಸ್ತ್ರ ಕ್ರೀಡಾ ಸುದ್ದಿ
ಟೀಂ ಇಂಡಿಯಾ ವರ್ಲ್ಡ್ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಎಂಟ್ರಿ ಕೊಟ್ಟಿದೆ. ಈ ಮೂಲಕ ಎರಡನೇ ಬಾರಿಗಟ ಭಾರತ ತಂಡ ಡಬ್ಲುಟಿಸಿಗೆ ಪ್ರವೇಶ ಪಡೆದಂತಾಗಿದೆ. ಕ್ರೈಸ್ಟ್ ಚರ್ಚ್ ನಲ್ಲಿ ನಡೆದ ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಕಿವೀಸ್ ಗೆಲುವು ಸಾಧಿಸಿದೆ.
ನ್ಯೂಜಿಲೆಂಡ್ ತಂಡದ ರೋಚಕ ಗೆಲುವು ಭಾರತ ತಂಡದ ಫೈನಲ್ ಕನಸನ್ನು ನನಸು ಮಾಡಿದೆ. ಟೀಂ ಇಂಡಿಯಾ ಜೊತೆಗೆ ಭಾರತೀಯ ಕ್ರೀಡಾ ಪ್ರೇಮಿಗಳಿಗೆ ಖುಷಿಯಾಗಿದೆ. ಸಧ್ಯ ಬಾರ್ಡರ್ ಗವಾಸ್ಕರ್ ಟೋಫಿಯ 4ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದ ಕೊನೆಯ ದಿನದ ಆಟವನ್ನು ಭಾರತ ಹಾಗೂ ಆಸೀಸ್ ಅಹಮದಾಬಾದಿನಲ್ಲಿ ಆಡುತ್ತಿವೆ.