ಬ್ರೇಕಿಂಗ್ ನ್ಯೂಸ್
Search

ಸೆಕ್ಸ್ ತಪ್ಪು.. ರೇಪ್ ಓಕೆನಾ ಎಂದು ಏಕ್ತಾ ಪ್ರಶ್ನಿಸಿದ್ಯಾಕೆ?

442

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್, ನಿರ್ಮಾಣ ಮಾಡಿರುವ ತ್ರಿಪಲ್ ಎಕ್ಸ್-2 ವೆಬ್ ಸಿರೀಸ್ ಗೆ ಸಂಬಂಧಿಸಿದಂತೆ ಸಿಕ್ಕಾಪಟ್ಟೆ ಟ್ರೋಲ್ ಗೆ ಒಳಗಾಗಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲಿ ಏಕ್ತಾ ಕಪೂರ್ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗ್ತಿದೆ.

ಇನ್ನು ವೆಬ್ ಸಿರೀಸ್ ನಲ್ಲಿ ಭಾರತೀಯ ಸೇನೆಗೆ ಅವಮಾನ ಮಾಡಲಾಗಿದೆ ಎಂದು ಕೇಳಿ ಬಂದಿದೆ. ಈ ಬಗ್ಗೆ ಎಫ್ಐಆರ್ ಸಹ ದಾಖಲಾಗಿದೆ. ಈ ಬಗ್ಗೆ ಮಾತ್ನಾಡಿರುವ ಏಕ್ತಾ ಕಪೂರ್, ನಾನು ಭಾರತೀಯ ಸೇನೆಗೆ ಅವಮಾನ ಮಾಡಿಲ್ಲ. ಗೌರವ ಇದೆ. ಒಂದು ವೇಳೆ ತಿಳಿಯದೆ ಮಾಡಿದ್ರೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ. ಆದ್ರೆ, ಸೋಷಿಯಲ್ ಮೀಡಿಯಾದಲ್ಲಿ ಬೆದರಿಕೆ ಸಹ ಬರ್ತಿವೆ.

ಸಿರೀಸ್ ನಲ್ಲಿರೋದು ಕಾಲ್ಪನಿಕ ಪಾತ್ರ. ಆ ಪಾತ್ರ ಸೃಷ್ಟಿಸಿದ್ದು ತಪ್ಪಾಗಿರೋದಕ್ಕೆ ತೆಗೆದು ಹಾಕಲಾಗಿದೆ. ಆದ್ರೆ, ನನ್ಗೆ ನನ್ನ ತಾಯಿಗೆ ಬೆದರಿಕೆ ಹಾಕಲಾಗ್ತಿದೆ. ರೇಪ್ ಮಾಡುವುದಾಗಿ ಅವಾಜ್ ಹಾಕಲಾಗ್ತಿದೆ. ಹೀಗಾಗಿ ಸೆಕ್ಸ್ ಗಿಂತ ರೇಪ್ ಓಕೆನಾ ಎಂದು ಪ್ರಶ್ನೆ ಮಾಡಿದ್ದಾಳೆ.




Leave a Reply

Your email address will not be published. Required fields are marked *

error: Content is protected !!