LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

6 ವಾಹನಗಳ ನಡುವೆ ಸರಣಿ ಅಪಘಾತ, 10 ಜನರಿಗೆ ಗಾಯ

ಪ್ರಜಾಸ್ತ್ರ ಸುದ್ದಿ

ನೆಲಮಂಗಲ(Nelamangala): ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ, ಎರಡು ಕಾರು, ಬಸ್, ಬೈಕ್ ಹಾಗೂ ಬುಲೆರೊ ಜೀಪ್ ಸೇರಿ 6 ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಬುಧವಾರ ಸಂಜೆ ಈ ಒಂದು ಘಟನೆ ನಡೆದಿದ್ದು, 10 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ನೆಲಮಂಗಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕ್ರೇನ್ ಮೂಲಕ ರಸ್ತೆ ಮಧ್ಯದಲ್ಲಿ ನಿಂತಿದ್ದ ಲಾರಿ, ಪಲ್ಟಿಯಾಗಿದ್ದ ಬುಲೆರೊ ವಾಹನವನ್ನು ತೆರವುಗೊಳಿಸಲಾಗಿದೆ. ಸರಣಿ ಅಪಘಾತದಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ಮೊದಲು ಯಾವ ವಾಹನಗಳ ನಡುವೆ ಅಪಘಾತ ಸಂಭವಿಸಿ ಸರಣಿ ಅಪಘಡ ನಡೆದಿದೆ ಅನ್ನೋದು ತಿಳಿದು ಬರಬೇಕಿದೆ. ಸಂಚಾರಿ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST