ಪ್ರಜಾಸ್ತ್ರ ಸುದ್ದಿ
ಆಕ್ಲೆಂಡ್: ನ್ಯೂಜಿಲೆಂಡ್ ವಿರುದ್ಧದ 5 ಏಕದಿನ ಪಂದ್ಯಗಳಲ್ಲಿ ಮೊದಲ ಪಂದ್ಯದಲ್ಲಿ ಭಾರತ ಜಯ ದಾಖಲಿಸಿದೆ. ಮಳೆಯಿಂದಾಗಿ ಡಕ್ವರ್ತ್ ಲ್ಯೂಯಿಸ್ ನಿಯಮದ ಪ್ರಕಾರ 5 ವಿಕೆಟ್ ಗಳ ಅಂತರದಲ್ಲಿ ಟೀಂ ಇಂಡಿಯಾ ವಿಜಯ ಸಾಧಿಸಿದೆ. ರನ್ ಮಿಷನ್ ವಿರಾಟ್ ಕೊಹ್ಲಿ ಅರ್ಧ ಶತಕ ಗಳಿಸಿದ್ದು, ಸಚಿನ್ ದಾಖಲೆ ಉಡೀಸ್ ಮಾಡಿದ.
ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 40.2 ಓವರ್ ಗಳಲ್ಲಿ 185 ರನ್ ಗಳಿಸಿತು. ನಂತರ ಬ್ಯಾಟ್ ಮಾಡಿದ ಟೀಂ ಇಂಡಿಯಾ 22.4 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿದಾಗ ಮತ್ತೆ ಮಳೆ ಶುರುವಾಯಿತು. ಸುಮಾರು ಹೊತ್ತು ಆದರೂ ಮಳೆ ನಿಲ್ಲದ ಕಾರಣ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತವನ್ನು ವಿಜಯ ತಂಡ ಎಂದು ಘೋಷಿಸಲಾಯಿತು.
51 ಬೌಲ್ ಗಳಲ್ಲಿ 74 ರನ್ ಗಳಿಸಿದ ವಿರಾಟ್ ಕೊಹ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತಂಡೂಲ್ಕರ್ ದಾಖಲೆಯನ್ನು ಮುರಿದರು. ಏಕದಿನ ಪಂದ್ಯಗಳಲ್ಲಿ ಚೇಸ್ ವೇಳೆ ಸಚಿನ್ 8,720 ರನ್ ಗಳಿಸಿದ್ದಾರೆ. ಕೊಹ್ಲಿ ಈಗ 169 ಇನ್ನಿಂಗ್ಸ್ ನಲ್ಲಿ 8,741 ರನ್ ಗಳಿಸಿ ಮತ್ತೊಮ್ಮೆ ಚೇಸ್ ಮಾಸ್ಟರ್ ಅನ್ನೋದು ಸಾಬೀತು ಮಾಡಿದರು. ಇನ್ನು 3ನೇ ಕ್ರಮದಲ್ಲಿ ಬ್ಯಾಟಿಂಗ್ ಗೆ ಬಂದು 13 ಸಾವಿರ ರನ್ ಗಳಿಸಿದ ಮೊದಲ ಬ್ಯಾಟರ್ ಆದರು. ರಿಕಿ ಪಾಂಟಿಂಗ್ 12,662 ರನ್ ಗಳಿಸಿದ್ದಾರೆ.


