ಪ್ರಜಾಸ್ತ್ರ ಸುದ್ದಿ
ತಿರುವನಂತಪುರಂ(Thiruvananthapuram): ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಹಾಗೂ ನಾಯಕ ಶುಭನಂ ಗಿಲ್ ಜೋಡಿಯ ಭರ್ಜರಿ ಶತಕದಿಂದಾಗಿ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ 3 ಏಕದಿನ ಪಂದ್ಯಗಳಲ್ಲಿ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿದೆ. ವೆಸ್ಟ್ ಇಂಡೀಸ್ ನೀಡಿದ್ದ 296 ರನ್ ಗಳ ಗುರಿಯನ್ನು 2 ವಿಕೆಟ್ ನಷ್ಟಕ್ಕೆ 41.4 ಓವರ್ ಗಳಲ್ಲಿ ತಲುಪಿ ವಿಜಯ ಸಾಧಿಸಿತು.
ವಿರಾಟ್ ಕೊಹ್ಲಿ ಅಜೇಯ 139, ನಾಯಕ ಗಿಲ್ 110 ರನ್ ಗಳಿಸಿ ಸಂಭ್ರಮಿಸಿದರು. ಏಕದಿನ ಕ್ರಿಕೆಟ್ ಮಾದರಿಯಲ್ಲಿ ಕೊಹ್ಲಿ 15 ಸಾವಿರ ರನ್ ಪೂರೈಸುವುದರೊಂದಿಗೆ ಹಲವು ದಾಖಲೆಗಳನ್ನು ಮಾಡಿದರು. ಅಲ್ಲದೆ ಏಕದಿನದ ಕ್ರಿಕೆಟ್ ಮಾದರಿಯಲ್ಲಿ 55 ಶತಕ ದಾಖಲಿಸಿದರು. ಗಿಲ್ 10ನೇ ಶತಕ ದಾಖಲಿಸಿದರು. ಟೀಂ ಇಂಡಿಯಾ ಪರ ಕುಲದೀಪ್ ಯಾದವ್ 40ಕ್ಕೆ 4 ವಿಕೆಟ್ ಕಿತ್ತಿ ಪಂದ್ಯ ಶ್ರೇಷ್ಟ ಪ್ರಶಸ್ತಿ ಪಡೆದರು.
ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ಜಸ್ಟಿನ್ ಗ್ರೀವ್ಸ್ 101, ಕ್ಯಾಂಪ್ ಬೆಲ್ 62, ಜಾಂಗೂ ಅಜೇಯ 58 ರನ್ ಗಳಿಂದಾಗಿ 7 ವಿಕೆಟ್ ನಷ್ಟಕ್ಕೆ 295 ರನ್ ಗಳಿಸತು. ಭಾರತ 41.4 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿ ಜಯ ಸಾಧಿಸಿತು.


