ಪ್ರಜಾಸ್ತ್ರ ಸುದ್ದಿ
ಹೈದ್ರಾಬಾದ್(Hyderabad): 2026-27ನೇ ಸಾಲಿನ ರಣಜಿ ಟ್ರೋಫಿ ಇನ್ನೇನು ಕೆಲ ದಿನಗಳಲ್ಲಿ ಶುರುವಾಗಲಿದೆ. ಹೈದ್ರಾಬಾದ್ ತಂಡದ ನಾಯಕನ್ನಾಗಿ ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಆಯ್ಕೆ ಮಾಡಲಾಗಿದೆ. ಶುಕ್ರವಾರ ನಡೆದ ಸಭೆಯಲ್ಲಿ ಹೈದ್ರಾಬಾದ್ ಕ್ರಿಕೆಟ್ ಸಂಸ್ಥೆಯು ಸಿರಾಜ್ ನಾಯಕ, ಸಿ.ವಿ.ಮಿಲಿಂದ್ ಉಪನಾಯಕ ಎಂದು ಆಯ್ಕೆ ಮಾಡಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಅನುಭವವನ್ನು ದೇಶಿ ಕ್ರಿಕೆಟ್ ನಲ್ಲಿ ಬಳಸಿಕೊಳ್ಳಲು ಅವಕಾಶ ಸಿಕ್ಕಿದೆ. ಇದರ ಜೊತೆಗೆ ಯುವ ಕ್ರಿಕೆಟ್ ಆಟಗಾರರಿಗೆ ಸಿರಾಜ್ ಅನುಭವದ ಆಟ ಸಹಾಯಕ್ಕೆ ಬರಲಿದೆ. ಅಕ್ಟೋಬರ್ 11ರಂದು ತ್ರಿಪುರ ವಿರುದ್ಧ ತನ್ನ ಮೊದಲ ಪಂದ್ಯವನ್ನು ಹೈದ್ರಾಬಾದ್ ತಂಡ ಆಡಲಿದೆ.
ಇದಾದ ಬಳಿಕ ಆಂಧ್ರಪ್ರದೇಶ, ಪಂಜಾಬ್, ಛತ್ತೀಸಗಢ, ಅಸ್ಸಾಂ, ಕರ್ನಾಟಕ ಹಾಗೂ ಸೌರಾಷ್ಟ್ರ ತಂಡಗಳ ವಿರುದ್ಧ ಕಣಕ್ಕೆ ಇಳಿಯಲಿದೆ. ಭಾರತ ತಂಡದ ಪಂದ್ಯಗಳು ಅಥವ ಇತರೆ ಕಾರಣಗಳಿಂದ ಸಿರಾಜ್ ಅಲಭ್ಯರಾದರೆ ಸಿ.ವಿ.ಮಿಲಿಂದ್ ತಂಡವನ್ನು ಮುನ್ನಡೆಸಲಿದ್ದಾರೆ.


