ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): 18ನೇ ಬ್ರಿಕ್ಸ್ ಸಮ್ಮೇಳನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಈ ಗುಂಪು ಯಾವುದೇ ದೇಶಗಳ ವಿರುದ್ಧವೂ ಅಲ್ಲ. ಜಾಗತಿಕ ಬಿಕ್ಕಟ್ಟು ಎದುರಿಸಲು ಬ್ರಿಕ್ಸ್ ದೇಶಗಳು ಮುಂದಿನ ಸಾಲಿನಲ್ಲಿ ನಿಂತಿವೆ. ಆದರೆ, ನಿಯಮ ರೂಪಿಸುವಲ್ಲಿ ಹಿಂದಿವೆ ಅಂತಾ ಹೇಳಿದ್ದಾರೆ.
ವಿಶ್ವದ ಆಡಳಿತದ ಸುಧಾರಣೆಗಾಗಿ ನಾವು ಜೊತೆಯಾಗಿ 10 ಪ್ರಸ್ತಾವನೆಗಳನ್ನು ರೂಪಿಸಬೇಕು. ಯಾಕಂದರೆ ಜಾಗತಿಕ ಆಡಳಿತ ಪಿರಮಿಡ್ ರೀತಿಯಲ್ಲಿದೆ. ಅಧಿಕಾರ ಹಾಗೂ ನಿರ್ಧಾರಗಳನ್ನು ಮೇಲಿನ ದೇಶಗಳು ತೆಗೆದುಕೊಳ್ಳುತ್ತವೆ. ಅದರ ಪರಿಣಾಮ ಕೆಳಗಿನ ದೇಶಗಳು ಅನುಭವಿಸುತ್ತೇವೆ ಎನ್ನುವ ಮೂಲಕ ಪರೋಕ್ಷವಾಗಿ ಅಮೆರಿಕ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳ ವಿರುದ್ಧ ವಾಗ್ದಾಳಿ ನಡೆಸಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತಕ್ಷಣದ ಸುಧಾರಣೆಗಳು ಆಗಬೇಕು ಎಂದು ಒತ್ತಾಯಿಸಿದರು.


