ಪ್ರಜಾಸ್ತ್ರ ಸುದ್ದಿ
ಟೀಂ ಇಂಡಿಯಾದ ಪ್ರಮುಖ ಆಟಗಾರರಲ್ಲಿ ಒಬ್ಬರಾದ ಅಜಿಂಕ್ಯ ರಹಾನೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಕಳೆದ 10 ವರ್ಷಗಳಿಂದ ಭಾರತೀಯ ಕ್ರಿಕೆಟ್ ತಂಡದಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸಿದ್ದು, ಈಗ ದಿಢೀರ್ ಎಂದು ನಿವೃತ್ತಿ ಹೇಳಿದ್ದಾರೆ. 38 ವರ್ಷದ ರಹಾನ್ 85 ಟೆಸ್ಟ್, 90 ಏಕದಿನ ಹಾಗೂ 20 ಟಿ0-20 ಪಂದ್ಯಗಳನ್ನು ಆಡಿದ್ದಾರೆ. ಒಟ್ಟು 8 ಸಾವಿರಕ್ಕೂ ಹೆಚ್ಚು ರನ್ ಗಳನ್ನು ಗಳಿಸಿದ್ದಾರೆ.
2020-21ರ ಬಾರ್ಡರ್-ಗವಾಸ್ಕರ್ ಟ್ರೋಫಿ ವೇಳೆ ಆಡಿದ ಅದ್ಬುತ್ ಆಟ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಎಂತಹ ಒತ್ತಡ ಸಂದರ್ಭದಲ್ಲಿಯೂ ತಾಳ್ಮೆ ಹಾಗೂ ಕೌಶಲ್ಯದಿಂದ ಆಡಿ ತಂಡಕ್ಕೆ ಆಸರೆಯಾಗಿದ್ದಾರೆ. ಏಕದಿನ ಪಂದ್ಯದಲ್ಲಿ 3 ಶತಕ, 24 ಅರ್ಧ ಶತಕ, ಟೆಸ್ಟ್ ಪಂದ್ಯದಲ್ಲಿ 12 ಶತಕ, 26 ಅರ್ಧಶತಕ, ಒಂದು ಅರ್ಧ ಶತಕ ಗಳಿಸಿದ್ದಾರೆ.
2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಟೆಸ್ಟ್, ಸೌಥ್ ಆಫ್ರಿಕಾ ವಿರುದ್ಧ 2018ರಲ್ಲಿ ಕೊನೆಯ ಏಕದಿನ ಪಂದ್ಯ, ವೆಸ್ಟ್ ಇಂಡೀಸ್ ವಿರುದ್ಧ 2016ರಲ್ಲಿ ಕೊನೆಯ ಟಿ-20 ಪಂದ್ಯವಾಡಿದ್ದಾರೆ. ಹಲವು ವರ್ಷಗಳಿಂದ ರಾಷ್ಟ್ರೀಯ ತಂಡಕ್ಕೆ ರಹಾನೆ ಆಯ್ಕೆ ಆಗುತ್ತಿಲ್ಲ. ಹೀಗಾಗಿ 38 ವರ್ಷದ ರಹಾನ್ ನಿವೃತ್ತಿ ಘೋಷಿಸಿದ್ದಾರೆ.



