ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಿ ಜೈಲಿನಲ್ಲಿ ವಶಪಡಿಸಿಕೊಂಡ ಮೊಬೈಲ್ ಹಾಗೂ ಇತರೆ ಗ್ಯಾಜೆಟ್ಸ್ ಗಳಲ್ಲಿ ಹತ್ತಾರು ಅಶ್ಲೀಲ ವಿಡಿಯೋಗಳು ಇರುವುದು ವಿಧಿ ವಿಜ್ಞಾನ ಪರೀಕ್ಷೆಯಿಂದ ತಿಳಿದು ಬಂದಿದೆ.
ಆಗಸ್ಟ್ 11ರಂದು ಸಿಸಿಬಿ ಪೊಲೀಸರು ದಿಢೀರ್ ದಾಳಿ ನಡೆಸಿದ್ದರು. ಈ ವೇಳೆ ಮೊಬೈಲ್, ಚಾರ್ಜರ್, ಪೆನ್ ಡ್ರೈವ್, ನೋಟ್ ಬುಕ್ ವಶಕ್ಕೆ ಪಡೆದಿದ್ದರು. ಫೋನ್ ಹಾಗೂ ಪೆನ್ ಡ್ರೈವ್ ವಿಧಿ ವಿಜ್ಞಾನ ಪ್ರಯೋಗಾಲಕ್ಕೆ ಕಳಿಸಲಾಗಿತ್ತು. ಫೋನ್ ನಲ್ಲಿ ಹತ್ತಾರ ಪೋರ್ನ್ ವಿಡಿಯೋಗಳು, ಪೆನ್ ಡ್ರೈವ್ ನಲ್ಲಿ ವೆಬ್ ಸೀರೀಸ್ ಗಳಿರುವುದು ಪತ್ತೆಯಾಗಿದೆ.


