LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಫಿಫಾ ವಿಶ್ವಕಪ್: ಸ್ಪೇನ್ ವಿಶ್ವ ಚಾಂಪಿಯನ್

ಚಾಂಪಿಯನ್ ತಂಡಕ್ಕೆ 482 ಕೋಟಿ, ರನ್ನರ್ ಅಪ್ ತಂಡಕ್ಕೆ 317 ಕೋಟಿ ರೂಪಾಯಿ

ಪ್ರಜಾಸ್ತ್ರ ಸುದ್ದಿ

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸ್ಪೇನ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ಹೊಸ ದಾಖಲೆ ಬರೆದಿದೆ. ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಗಿದ್ದ ಅರ್ಜೆಂಟೀನಾ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಫುಟ್ಬಾಲ್ ಲೋಕದ ದಿಗ್ಗಜರಲ್ಲಿ ಒಬ್ಬರಾದ ಅರ್ಜೆಂಟೀನಾದ ಲಿಯೋನಾ ಮೆಸ್ಸಿಗೆ ಕಣ್ಣೀರು ಹಾಕಿದರು. ಈ ಗೆಲುವಿನ ಮೂಲಕ ಸ್ಪೇನ್ 2ನೇ ಬಾರಿ ಚಾಂಪಿಯನ್ ಆಯಿತು.

1-0 ಅಂತರದಿಂದ ಸ್ಪೇನ್ ಜಯ ದಾಖಲಿಸಿತು. ಇಡೀ ಟೂರ್ನಿಯಲ್ಲಿ ಸ್ಪೇನ್ 38 ಪಂದ್ಯಗಳಲ್ಲಿ ಅಜೇಯ ಓಟವನ್ನು ನಡೆಸಿತು. ಈ ಟೂರ್ನಿಯಲ್ಲಿ ಕೇವಲ 8 ಪಂದ್ಯಗಳಲ್ಲಿ ಒಂದೇ ಒಂದು ಗೋಲು ಬಿಟ್ಟುಕೊಟ್ಟಿದೆ. ಇದರೊಂದಿಗೆ ರಕ್ಷಣಾ ಕ್ಷೇತ್ರದಲ್ಲಿ ಎಷ್ಟೊಂದು ಮೇಲುಗೈ ಸಾಧಿಸಿದೆ ಅನ್ನೋದಕ್ಕೆ ಇದು ಸಾಕ್ಷಿ. ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ತಂಡ ಒಂದು ಗೋಲು ಗಳಿಸದಂತೆ ನೋಡಿಕೊಂಡಿತು ಅಂದರೆ ಸ್ಪೇನ್ ಟೀಂನ ತಾಕತ್ತು ತಿಳಿಯುತ್ತೆ.

ಸ್ಪೇನ ತಂಡದ ನಾಯಕ, ಮಿಡ್ ಫೀಲ್ಡರ್ ರೊಡ್ರಿ ಗೋಲ್ಡನ್ ಬೌಲ್ ಪ್ರಶಸ್ತಿ ಪಡೆದಿದ್ದಾರೆ. ಫ್ರಾನ್ಸ್ ನಾಯಕ ಕೈಲಿಯನ್ ಎಂಬಾಪೆ ಗೋಲ್ಡನ್ ಬೂಟ್ ಪ್ರಶಸ್ತಿ ಪಡೆದಿದ್ದಾರೆ. 8 ಪಂದ್ಯಗಳಲ್ಲಿ 10 ಗೋಲು ಬಾರಿಸಿದ್ದಾರೆ. ಅತ್ಯುತ್ತಮ ಗೋಲ್ ಕೀಪರ್ ಮಾಡಿದ ಸ್ಪೇನ್ ತಂಡದ ಉನೈ ಸಿಮೋನ್ ಗೋಲ್ಡನ್ ಗ್ಲೌ ಪ್ರಶಸ್ತಿ ಪಡೆದಿದ್ದಾರೆ. ಸ್ಪೇನ್ ತಂಡದ 19 ವರ್ಷದ ಪೌ ಕುಬಾರ್ಸಿ ಅತ್ಯುತ್ತಮ ಯುವ ಆಟಗಾರ ಪ್ರಶಸ್ತಿ ಪಡೆದರು.

ಚಾಂಪಿಯನ್ ಆದ ಸ್ಪೇನ್ ತಂಡಕ್ಕೆ 482 ಕೋಟಿ ರೂಪಾಯಿ ಬಹುಮಾನ ಮೊತ್ತ. ರನ್ನರ್ ಅಪ್ ಆದ ಅರ್ಜೆಂಟೀನಾ ತಂಡಕ್ಕೆ 317 ಕೋಟಿ ರೂಪಾಯಿ ಬಹುಮಾನ ಮೊತ್ತ ಬಂದಿದೆ. 3ನೇ ಸ್ಥಾನ ಪಡೆದ ಇಂಗ್ಲೆಂಡ್ ತಂಡಕ್ಕೆ 279 ಕೋಟಿ ರೂಪಾಯಿ ಸಿಕ್ಕಿದೆ. 4ನೇ ಸ್ಥಾನ ಪಡೆದ ಫ್ರಾನ್ಸ್ ಗೆ 259 ಕೋಟಿ ರೂಪಾಯಿ ಸಿಕ್ಕಿದೆ. ಅಲ್ಲದೆ 5 ರಿಂದ 8ನೇ ಸ್ಥಾನ ಪಡೆಯುವ ಪ್ರತಿ ತಂಡಕ್ಕೆ 182 ಕೋಟಿ ರೂಪಾಯಿ ನೀಡಲಾಗುತ್ತಿದೆ. ಈ ಬಾರಿ ಫಿಫಾ ವಿಶ್ವಕಪ್ ಟೂರ್ನಿಗಾಗಿ ಅಂತಾರಾಷ್ಟ್ರೀಯ ಫುಟ್ಬಾಲ್ ಒಕ್ಕೂಟ ಬರೋಬ್ಬರಿ 7,280 ಕೋಟಿ ರೂಪಾಯಿ ಮೀಸಲು ಇಟ್ಟಿತ್ತು. ಇದರಲ್ಲಿ ತಂಡಗಳ ಬಹುಮಾನ ಮೊತ್ತವೇ 5,469 ಕೋಟಿ ರೂಪಾಯಿ ಇದೆ.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST