ಪ್ರಜಾಸ್ತ್ರ ಸುದ್ದಿ
ಗ್ಲಾಸ್ಗೊ(Glasgo): ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಡೆಕಥ್ಲಾನ್ ಕ್ರೀಡೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ತೇಜಸ್ವಿನ್ ಶಂಕರ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ ಕಾಮನ್ ವೆಲ್ತ್ ನಲ್ಲಿ ಡೆಕಥ್ಲಾನ್ ಸ್ಪರ್ಧೆಯಲ್ಲಿ ಪದಕ ಗೆದ್ದ ಮೊದಲ ಕ್ರೀಡಾಪಟು ಆಗಿದ್ದಾರೆ. 27 ವರ್ಷದ ತೇಜಸ್ವಿನ್ ಒಟ್ಟು 7,976 ಅಂಕಗಳನ್ನು ಪಡೆಯುವ ಮೂಲಕ ಕಂಚಿನ ಪದಕ ಪಡೆದಿದ್ದಾರೆ.
2022ರಲ್ಲಿ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಹೈಜಂಪ್ ಸ್ಪರ್ಧೆಯಲ್ಲಿ 8057 ಅಂಕಗಳೊಂದಿಗೆ ಕಂಚಿನ ಪದಕ ಗೆದ್ದಿದ್ದರು. ಮೊಣಕಾಲಿನ ನೋವಿನಿಂದ ಈ ಬಾರಿಯ ಟೂರ್ನಿಯಲ್ಲಿ ಹೈಜಂಪ್ ನಿಂದ ದೂರ ಉಳಿದಿದ್ದರೂ ಡೆಕಥ್ಲಾನ್ ಸ್ಪರ್ಧೆಯಲ್ಲಿ ಭಾಗವಹಿಸಿ ಕಂಚಿನ ಪದಕ ಸಾಧನೆ ಮಾಡಿ ದಾಖಲೆ ಬರೆದಿದ್ದಾರೆ.



