ಪ್ರಜಾಸ್ತ್ರ ಸುದ್ದಿ
ದೇವರ ಹಿಪ್ಪರಗಿ(Devara Hipparagi): ತೀವ್ರ ಬರಗಾಲ ಮತ್ತು ಖಾಸಗಿ ಫೈನಾನ್ಸ್ಗಳ ಸಾಲದ ಸುಳಿಗೆ ಸಿಲುಕಿದ ರೈತರೊಬ್ಬರು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಜೇಟ್ಟೆಪ್ಪ ಭೀಮಪ್ಪ ದೊಡ್ಡಮನಿ (55) ಆತ್ಮಹತ್ಯೆಗೆ ಶರಣಾದ ದುರ್ದೈವಿ ರೈತ ಎಂದು ತಿಳಿದು ಬಂದಿದೆ.
ಮೃತ ರೈತ ಒಂದೂವರೆ ಎಕರೆ ಜಮೀನು ಹೊಂದಿದ್ದು, ಮಳೆಯಿಲ್ಲದೆ ಬೆಳೆ ಸಂಪೂರ್ಣವಾಗಿ ಒಣಗಿ ಹೋಗಿತ್ತು. ಕೃಷಿ ನಿರ್ವಹಣೆ ಮತ್ತು ಕುಟುಂಬದ ನಿರ್ವಹಣೆಗಾಗಿ ಇವರು ಇಎಸ್ಎಎಫ್ ಹಾಗೂ ಫೈವ್ ಸ್ಟಾರ್ ಬಿಜಿನೆಸ್ ಫೈನಾನ್ಸ್ ಸೇರಿದಂತೆ ವಿವಿಧ ಖಾಸಗಿ ಸಂಸ್ಥೆಗಳಿಂದ ಮತ್ತು ಕೈಗಡವಾಗಿ ತೆಗೆದುಕೊಂಡಿದ್ದು ಸೇರಿದಂತೆ ಸುಮಾರು 4.50 ಲಕ್ಷ ಸಾಲ ಮಾಡಿದ್ದರಂತೆ.


