LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಸ್ಸಿನ ಚಕ್ರದಡಿ ಸಿಲುಕಿ ವ್ಯಕ್ತಿ ಸಾವು

ಪ್ರಜಾಸ್ತ್ರ ಸುದ್ದಿ

ಬೆಳಗಾವಿ(Belagavi): ಬಸ್ಸಿನಿಂದ ಇಳಿದು ಇನ್ನೇನು ಆತ ಮನೆಗೆ ಹೋಗಬೇಕು ಅಷ್ಟರಲ್ಲಿ ಆಯತಪ್ಪಿ ಬಿದ್ದು ಬಸ್ಸಿನ ಚಕ್ರದಡಿ ಸಿಲುಕಿ ಮೃತಪಟ್ಟ ಘಟನೆ ಹುಕ್ಕೇರಿ ತಾಲೂಕಿನ ನಿಡಸೋಸಿ ಗ್ರಾಮದಲ್ಲಿ ನಡೆದಿದೆ. ದುಂಡಯ್ಯ ರಾಚಯ್ಯ ಕಮತೆ(42) ಮೃತ ದುರ್ದೈವಿ. ಸಂಕೇಶ್ವರ ಠಾಣೆ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಸಂಕೇಶ್ವರಕ್ಕೆ ಹೋಗಿದ್ದ ದುಂಡಯ್ಯ ಸಂಜೆ ಊರಿಗೆ ವಾಪಸ್ ಆಗುತ್ತಿದ್ದ. ಗ್ರಾಮದ ಬಸ್ ನಿಲ್ದಾಣದಲ್ಲಿ ಇಳಿಯುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಕೆಎಸ್ಆರ್ ಟಿಸಿ ಬಸ್ ನ ಹಿಂದಿನ ಚಕ್ರ ಆತನ ಮೇಲೆ ಹರಿದಿದೆ. ಇದರಿಂದಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST