LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಟ ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ, ಹಾವೇರಿಯಲ್ಲಿ ಆರೋಪಿ ಬಂಧನ

ಪ್ರಜಾಸ್ತ್ರ ಸುದ್ದಿ

ಹಾವೇರಿ(Haveri): ಬಾಲಿವುಡ್ ನಟ ಸಲ್ಮಾನ್ ಖಾನ್(Salman Khan) ಗೆ ಜೀವ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಹಾವರಿಯಲ್ಲಿ ಆರೋಪಿಯನ್ನು ಬುಧವಾರ ಬಂಧಿಸಲಾಗಿದೆ. ಬಿಖಾ ರಾಮ್ ಅಲಿಯಾಸ್ ವಿಕ್ರಮ್(32) ಎಂಬುವನನ್ನು ಜಿಲ್ಲಾ ಪೊಲೀಸರು ಬಂಧಿಸಿ ಮುಂಬೈ ಭಯೋತ್ಪಾದನಾ ನಿಗ್ರಹ ಪಡೆಯ ವಶಕ್ಕೆ ನೀಡಿದ್ದಾರೆ. ಇ ರಾಜಸ್ಥಾನ ಮೂಲದವನಾಗಿದ್ದು, ಕೆಲಸ ಹುಡುಕಿಕೊಂಡು ಇಲ್ಲಿಗೆ ಬಂದಿದ್ದ ಎಂದು ತಿಳಿದು ಬಂದಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ನಟ ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ(Life Threatening) ಹಾಕಿದ್ದ. ಬೇರೆ ಬೇರೆ ಊರುಗಳಲ್ಲಿ ತಲೆ ಮರೆಸಿಕೊಂಡಿದ್ದ. ಸುಮಾರು ಒಂದೂವರೆ ತಿಂಗಳ ಹಿಂದೆ ಹಾವೇರಿಗೆ ಬಂದಿದ್ದಾನಂತೆ. ಗೌಡರ ಓಣಿಯಲ್ಲಿ ರೂಮು ಹಿಡಿದು ವಾಸವಾಗಿ ನಿರ್ಮಾಣ ಹಂತದ ಕಟ್ಟಡ ಕೆಲಸ ಮಾಡುತ್ತಿದ್ದನಂತೆ. ಇವನ ಇರುವಿಕೆ ಬಗ್ಗೆ ಮುಂಬೈ ಭಯೋತ್ಪಾದನಾ ನಿಗ್ರಹ ಪಡೆ ಮಾಹಿತಿ ನೀಡಿತ್ತು ಎಂದು ಹಾವೇರಿ ಎಸ್ಪಿ ಅಂಶುಕುಮಾರ್ ಹೇಳಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST