LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗಣೇಶ ಹಬ್ಬಕ್ಕೆ ಬರ್ತಿದ್ದ ಸಹೋದರರು ಅಪಘಾತದಲ್ಲಿ ಸಾವು

ಪ್ರಜಾಸ್ತ್ರ ಸುದ್ದಿ

ಇಳಕಲ್(Ilakal): ಗಣೇಶ ಹಬ್ಬಕ್ಕೆ ಅಂತಾ ಸಹೋದರರನ್ನು ಕರೆದುಕೊಂಡು ಬೈಕ್ ನಲ್ಲಿ ಬರುತ್ತಿದ್ದಾಗ ರಸ್ತೆ ಪಕ್ಕದಲ್ಲಿ ನಿಂತಿದ್ದ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದ(Road Accident) ಪರಿಣಾಮ, ಸಹೋದರಿಬ್ಬರು ಮೃತಪಟ್ಟ ಘಟನೆ ಬೆಳಗಾವಿ ರಾಯಚೂರು ಹೆದ್ದಾರಿಯಲ್ಲಿ ನಡೆದಿದೆ. ಇಳಕಲ್  ನಗರದ ಓಂಕಾರ ಟಾಕೀಸ್ ಹತ್ತಿರದ ನಿವಾಸಿಗಳಾದ ಅಮರೇಶ ಬೆನಕನಾಳಮಠ(24) ಹಾಗೂ ಸಹೋದರ ಶರಣಯ್ಯ(17) ಮೃತ ದುರ್ದೈವಿಗಳು.

ಗಣೇಶ(Ganesh festival) ಹಬ್ಬದ ದಿನ ಮನೆಯಲ್ಲಿ ಸಂತಸ ಮೂಡುವ ಬದಲು ಶೋಕ ಮಡುಗಟ್ಟಿದೆ. ಮಕ್ಕಳಿಬ್ಬರನ್ನು ಕಳೆದುಕೊಂಡ ಕುಟುಂಬಸ್ಥರು ದುಃಖದಲ್ಲಿ ಮುಳುಗಿದ್ದಾರೆ. ಅಮೀನಗಡ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST