ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ನಗರದ ವಿದ್ಯಾಚೇತನ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯ ಅಧ್ಯಕ್ಷರಾದ ಕುಸುಮಾ ರಮೇಶ ಯಾಳಗಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಶಾಲೆಯ ಪ್ರಿನ್ಸಿಪಲ್ ಡೇನಿಲ್ ಅವರು ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಗುರುಗಳಾದ ಮೇರಿ ಜಾರ್ಜ್ ಅವರು ಸಾಥ್ ನೀಡಿದರು.
ಶಾಲೆಯ ಪಾಲಕರ ಪ್ರತಿನಿಧಿಯಾದ ಈರಣ್ಣ ಬಡಗೇರ ಅವರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದರು. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಗಾಂಧೀಜಿ, ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ್ ಅಜಾದ್, ಭಾರತಮಾತೆ, ಕಿತ್ತೂರುರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಸೇರಿದಂತೆ ವಿವಿಧ ಮಹಾನ್ ನಾಯಕರ ವೇಷ ಭೂಷಣ ತೊಟ್ಟು ಮಿಂಚಿದರು.
ಈ ವೇಳೆ ಶಿಕ್ಷಕರಾದ ರೇಣುಕಾ.ಎ.ಬುರನಪುರ, ರುಕ್ಮುಣಿ.ಪಿ.ಬಡಗೇರ, ಪಾಲಕಾರದ ಶಾಂತೇಶ ಶಿವಸಿಂಪಗೇರ, ಅಶೋಕ ಹೊನ್ನಳ್ಳಿ, ಸುನಂದಾ ಬಮ್ಮಣ್ಣಿ, ಸಂಗೀತಾ ಕೇಶವತಕರ್, ಬೋರಮ್ಮ ಅಲ್ಲಾಪುರ ಸೇರಿದಂತೆ ವಿದ್ಯಾರ್ಥಿಗಳು, ಬೋದಕೇತರ ಸಿಬ್ಬಂದಿ ಉಪಸ್ಥಿತರಿದ್ದರು.



