LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಾವೇರಿ 5ನೇ ಹಂತದ ಯೋಜನೆಗೆ ಅ.16ರಂದು ಚಾಲನೆ: ಡಿಸಿಎಂ ಡಿಕೆಶಿ

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಬೆಂಗಳೂರು ಜನರ ಬಹುದಿನಗಳ ಕನಸಾಗಿರುವ ನಗರಕ್ಕೆ ಕಾವೇರಿ ನೀರು ಒದಗಿಸುವ ಕುಡಿಯುವ ನೀರು ಯೋಜನೆಯ 5ನೇ ಹಂತಕ್ಕೆ ಅಕ್ಟೋಬರ್ 16ರಂದು ಚಾಲನೆ ನೀಡಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾವೇರಿ 5ನೇ ಹಂತದ ಕುಡಿಯುವ ನೀರು ಯೋಜನೆಯಿಂದ ಬೆಂಗಳೂರಿನ 50 ಲಕ್ಷ ಜನರಿಗೆ ಅನುಕೂಲವಾಗಿದೆ ಎಂದರು.

ತೊರೇಕಾಡನ ಹಳ್ಳಿಯಲ್ಲಿ ಕಾವೇರಿ 5ನೇ ಹಂತದ ಯೋಜನೆಗೆ ಅಕ್ಟೋಬರ್ 16ರಂದು ಚಾಲನೆ ನೀಡಲಾಗುತ್ತಿದೆ. ಇದರಿಂದ ಮನೆ ಮನೆಗೂ ನೀರು ತಲುಪಲಿದೆ. ಎಲ್ಲ ಸಮಸ್ಯೆಗಳನ್ನು ದಾಟಿಕೊಂಡು ನಗರದ ಜನರ ಬಹುದಿನಗಳ ಬೇಡಿಕೆ ಈಡೇರುತ್ತಿದೆ. ಈ ಮೂಲಕ ಕಾವೇರಿ ನೀರು ಸಿಲಿಕಾನ್ ಸಿಟಿ ಜನರಿಗೂ ಸಿಗಲಿದೆ ಎಂದು ಹೇಳಲಾಗಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST