LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಲಪಾಡ್ ಹ್ಯಾರಿಸ್ ಮನೆ ಸೇರಿ 17 ಕಡೆ ಇಡಿ ದಾಳಿ

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಬಿಟ್ ಕಾಯಿನ್ ಪ್ರಕರಣ ಸಂಬಂಧ ಶ್ರೀಕೃಷ್ಣ ರಮೇಶ ಅಲಿಯಾಸ್ ಶ್ರೀಕಿ ಜೊತೆಗೆ ಹಣಕಾಸಿನ ವ್ಯವಹಾರ ನಡೆಸಿರುವ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಯುವ ಮುಖಂಡ ಮಹಮದ್ ನಲಪಾಡ್ ಹ್ಯಾರಿಸ್ ಮನೆ ಸೇರಿ 17 ಕಡೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 100ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಶೋಧ ಕಾರ್ಯ ನಡೆಸಿದೆ.

ಸೋಮವಾರ ಮುಂಜಾನೆ ಸುಮಾರು 6.30ರ ವೇಳೆಗೆ ಶಾಂತಿನಗರದಲ್ಲಿರುವ ನಲಪಾಡ್ ತಂದೆ, ಶಾಸಕ ಎನ್.ಎ ಹ್ಯಾರಿಸ್ ಅವರ ಮನೆ ಸೇರಿ ಇತರೆ ಕಡೆ ದಾಳಿ ಮಾಡಿದ್ದು, ಶೋಧ ನಡೆದಿದೆ. ಶ್ರೀಕಿ ಹಾಗೂ ನಲಪಾಡ್ ನಡುವೆ ಪ್ರಕರಣ ಬೆಳಕಿಗೆ ಬರುವುದಕ್ಕೂ ಮೊದಲೆ ಆರು ವರ್ಷಗಳ ಕಾಲ ಹಣಕಾಸಿನ ವ್ಯವಹಾರ ನಡೆದಿದೆ. ಆ ಸಮಯದಲ್ಲಿ 4.65 ಕೋಟಿ ರೂಪಾಯಿ ಕೈ ಬದಲಾಗಿದೆ. ಇದರ ಹಿನ್ನಲೆ ಏನು ಅನ್ನೋದರ ತನಿಖೆ ನಡೆದಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST