LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಿಂದಗಿ: ಜಾನಪದ ಗಾಯಕಿ ಇಮಾಂಬಿಗೆ ಜಾನಪದ ಅಕಾಡೆಮಿ ಪ್ರಶಸ್ತಿ

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ತಾಲೂಕಿನ ಬೋರಗಿ ಗ್ರಾಮದ ಜಾನಪದ ಗಾಯಕಿ ಇಮಾಂಬಿ ಇಮಾಮಸಾಬ್ ದೊಡ್ಡಮನಿ ಅವರಿಗೆ 2023ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ ಸಂದಿದೆ. ಈ ಮೂಲಕ ಅವರ ದಶಕಗಳ ಜಾನಪದ ಕ್ಷೇತ್ರದ ಸೇವೆಗೆ ಪ್ರಶಸ್ತಿ ಒಲಿದು ಬಂದಿದೆ. ಇದರಿಂದಾಗಿ ಸಿಂದಗಿ ತಾಲೂಕಿಗೆ ಹೆಮ್ಮೆಯಾಗಿದೆ.

ಜಾನಪದ ಗಾಯಕನದ ಮೂಲಕ ಧಾರ್ಮಿಕ ಭಾವೈಕ್ಯತೆಯನ್ನು ಸಾರುತ್ತಾ ಬರುತ್ತಿದ್ದಾರೆ. ಸಾಹಿತ್ಯದ ಕಾರ್ಯಕ್ರಮಗಳಲ್ಲಿ, ಸಂಗೀತದ ಕಾರ್ಯಕ್ರಮಗಳಲ್ಲಿ ಸೇರಿದಂತೆ ಹಲವು ಕಡೆ ತಮ್ಮ ಗಾಯನದ ಮೂಲಕ ಎಲ್ಲರನ್ನು ರಂಜಿಸುವ ಹಾಗೂ ಜಾನಪದ ಕಲೆಯನ್ನು ಉಳಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ. 2023ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ತಾಲೂಕಿನ ಜನತೆ ಅಭಿನಂದಿಸಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST