LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

‘ಗಂಗಾ’ ಹೆಸರಿನೊಂದಿಗೆ ಬದಲಾದ ಕುಮಾರಕೃಪ ಅತಿಥಿ ಗೃಹ

ಸರ್ಕಾರಿ ಕುಮಾರಕೃಪ ಅತಿಥಿ ಗೃಹ ಇನ್ನು ಮುಂದೆ ಗಂಗಾ

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಐತಿಹಾಸಿಕ ಸರ್ಕಾರಿ ಅತಿಥಿ ಗೃಹ ಇದೀಗ ಗಂಗಾ ಎಂದು ಮರುನಾಮಕರಣಗೊಂಡಿದೆ. ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮರುನಾಮಕರಣ ಮಾಡಿದ್ದು, ಪತ್ನಿಯೊಂದಿಗೆ ಖಾಸಗಿಯಾಗಿ ಸೋಮುವಾರ ಪೂಜಾ ಕಾರ್ಯಕ್ರಮ ಮಾಡಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಟ್ಟಡದ ಪಾರಂಪರಿಕೆಯನ್ನು ಉಳಿಸಿಕೊಂಡು ಶೇಕಡ 10ರಷ್ಟು ಮರುವಿನ್ಯಾಸ ಮಾಡಲಾಗಿದೆ. ನಾನು ಪಡೆದಿದ್ದ ಸರ್ಕಾರಿ ನಿವಾಸ ಚಿಕ್ಕದಾಗಿತ್ತು. ಕುಮಾರಕೃಪ ಉಪಯೋಗವಾದ ಕಾರಣ ಇದನ್ನು ಅಧಿಕೃತ ನಿವಾಸವಾಗಿ ಪರಿವರ್ತಿಸಿ ಪೂಜೆ ಮಾಡಿದ್ದೇನೆ ಎಂದರು.

ಗುರುವಾರ 224 ಶಾಸಕರನ್ನು, ಸಂಸದರನ್ನು, ವಿಧಾನ ಪರಿಷತ್ ಸದಸ್ಯರನ್ನು ಆಹ್ವಾನಿಸುತ್ತೇನೆ. ನಂತರ ಈ ಮನೆಯಲ್ಲಿಯೇ ಎಲ್ಲರನ್ನೂ ಭೇಟಿಯಾಗುತ್ತೇನೆ. ಶೇಕಡ 90ರಷ್ಟು ಉಪಕರಣಗಳು ನನ್ನ ಖಾಸಗಿಯಾಗಿವೆ. ಕುಮಾರಕೃಪದಲ್ಲಿದ್ದ ಪಿಠೋಪಕರಣಗಳನ್ನು ಉಳಿಸಿಕೊಂಡಿದ್ದೇನೆ. ಕೆಲವರು ಆರ್ ಟಿಐ ಹಾಕಿದ್ದಾರೆ. ವಿರೋಧ ಪಕ್ಷದವರು ಟೀಕೆ ಮಾಡುತ್ತಿದ್ದಾರೆ. ಅದು ಅವರ ಕೆಲಸ ಎಂದರು.

ಇಲ್ಲಿ ಶಾಸಕರು, ಅಧಿಕಾರಿಗಳನ್ನು ಭೇಟಿಯಾಗುತ್ತೇನೆ. ಸಾರ್ವಜನಿಕರನ್ನು ಕೃಷ್ಣದಲ್ಲಿ ಭೇಟಿಯಾಗುತ್ತೇನೆ. ಗಂಗಾದಲ್ಲಿ ಪ್ರತ್ಯೇಕ ಹಾಲ್ ನಿರ್ಮಿಸಲಾಗುತ್ತಿದೆ. ಇನ್ನು ಒಂದೆರಡು ತಿಂಗಳು ಬೇಕಾಗುತ್ತೆ. ಅದಾದ ಬಳಿಕ ಸಾರ್ವಜನಿಕರನ್ನು ಇಲ್ಲಿಯೇ ಭೇಟಿಯಾಗುತ್ತೇನೆ. ನಾವು ಇಲ್ಲಿ ಯಾರು ಶಾಶ್ವತವಲ್ಲ. ಮುಖ್ಯಮಂತ್ರಿಯಾದವರಿಗೆ ಇದು ಅನುಕೂಲವಾಗಲಿದೆ. ಅತಿಥಿ ಗೃಹ ಉಪಯೋಗವಾಗಲಿ, ವ್ಯರ್ಥವಾಗುವುದು ಬೇಡ ಎಂದು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದರು.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST