LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕ ಮನಗೂಳಿ

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಪಲ್ಸ್‌ ಪೋಲಿಯೋ ಲಸಿಕಾ ಅಭಿಯಾನ ಕಾರ್ಯಕ್ರಮ ಭಾನುವಾರ ನಡೆಯಿತು. ಜೂನ್ 28ರಿಂದ ಜುಲೈ 1ರವರಗೆ ನಡೆಯುವ ರಾಷ್ಟ್ರೀಯ ಪಲ್ಸ್‌ ಪೋಲಿಯೋ ಲಸಿಕಾ ಅಭಿಯಾನವನ್ನು ಶಾಸಕ ಅಶೋಕ ಮನಗೂಳಿ ಅವರು ಮಗುವಿಗೆ ಎರಡು ಹನಿ ಪೋಲಿಯೋ ಲಸಿಕೆ ಹಾಕುವುದರ ಮೂಲಕ ಅಭಿಯಾನವನ್ನು ಉದ್ಘಾಟಿಸಿದ್ದರು.

ಈ ವೇಳೆ ಮಾತನಾಡಿದ ಅವರು, 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ತಪ್ಪದೆ ಪೋಲಿಯೋ ಹನಿ ಹಾಕಿಸಿ ಪೋಲಿಯೋ ರೋಗವನ್ನು ತಡೆಗಟ್ಟಲು ಸಹಕರಿಸಿ. ಪೋಲಿಯೋ ರೋಗದಿಂದ ಅಂಗವಿಕಲತೆ ಬರುವುದರಿಂದ ದೈನಿಂದಿನ ಜೀವನಕ್ಕೆ ಬಹಳ ಕಷ್ಟ ಪಡಬೇಕಾಗುತ್ತದೆ. ಈಗಾಗಲೇ ನಮ್ಮ ದೇಶ ಪೋಲಿಯೋ ಮುಕ್ತ ರಾಷ್ಟ್ರವಾಗಿದ್ದು, ಇನ್ನೂ ನೆರೆ ರಾಷ್ಟ್ರಗಳಲ್ಲಿ ಪೋಲಿಯೋ ಪ್ರಕರಣಗಳು ಕಂಡುಬಂದಿರುವುದರಿಂದ ಮತ್ತೆ ನಮ್ಮ ಮಕ್ಕಳಿಗೆ ಸೋಂಕು ಬಾರದಂತೆ ತಡೆಯಲು ಪೋಲಿಯೋ ಲಸಿಕೆ ರಕ್ಷಣೆ ನೀಡುತ್ತಿದ್ದು, ಕಡ್ಡಾಯವಾಗಿ ಪೋಲಿಯೋ ಹನಿ ಹಾಕಿಸಿ ಎಂದರು.

ತಾಲೂಕಾ ಆರೋಗ್ಯ ಅಧಿಕಾರಿ ಡಾ.ಎ.ಎ ಮಾಗಿ ಮಾತನಾಡಿ, ದೇವರ ಹಿಪ್ಪರಗಿ, ಸಿಂದಗಿ ಹಾಗೂ ಆಲಮೇಲ ತಾಲೂಕಾ ಸೇರಿದಂತೆ ಒಟ್ಟು 54,325 ಐದು ವರ್ಷದ ಒಳಗಿನ ಮಕ್ಕಳಿಗೆ  ಪೋಲಿಯೋ ಲಸಿಕಾ ಹನಿ ಹಾಕುವ ಗುರಿ ಹೊಂದಲಾಗಿದೆ. 83,635  ಮನೆಗಳಿಗೆ ಭೇಟಿ ನೀಡಲಾಗುವುದು. ಒಟ್ಟು 230 ತಂಡಗಳನ್ನು ನೇಮಿಸಿದ್ದು. 460 ಪೋಲಿಯೋ ಲಸಿಕಾ  ಹಾಕುವ ಸಿಬ್ಬಂದಿ, 48 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಜೂನ್ 29ರಿಂದ ಮೂರು ದಿನ ಮನೆ ಮನೆ ಭೇಟಿ ಮಾಡಿ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಯೋಜನೆ ರೂಪಿಸಲಾಗಿದೆ ಎಂದರು.

ಈ ವೇಳೆ ತಾಲೂಕಾ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಶಂಕರಾವ ದೇಶಮುಖ, ತಾಲೂಕಾ ಆಯುಷ ವೈದ್ಯಾಧಿಕಾರಿ ಡಾ.ಮಹಾಂತೇಶ ಹಿರೇಮಠ, ಡಾ.ಮೌನೇಶ ಬಡಿಗೇರ, ಡಾ.ವಿಜಯ ಮಹಾಂತೇಶ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಶಾಂತು ರಾಣಾಗೋಳ, ಜಹಾಂಗೀರ ಸಿಂದಗಿಕರ, ವಿನಾಯಕ ಕುಲಕರ್ಣಿ, ರಾಜಶೇಖರ ನರಗೋಧಿ, ಶ್ರೀಶೈಲ ಪರೀಟ, ವಾಯ್.ವಿ.ಚೂರಿ, ವಿದ್ಯಾ ಹಿರೇಪಟ್ಟ, ಸಿದ್ದರಾಮ ಮುಗದಿ, ಸಾಯಬಣ್ಣ ಗಂಜಲಖೇಡ, ಜಗದೀಶ ಡೋಣುರ, ಗುರುಬಾಯಿ ಬಿರಾದಾರ, ವಿರೇಂದ್ರ ಪವಾಡೆ, ಮಹಾಲಿಂಗ ಫಕಿರಪೂರ, ರಫೀಕ ಮುಲ್ಲಾ ಹಾಗೂ ಆಸ್ಪತ್ರೆಯ ವಿವಿಧ ವೃಂದದ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು. ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್‌.ಡಿ.ಕುಲಕರ್ಣಿ ಸ್ವಾಗತಿಸಿದರು. ತಾಲೂಕಾ ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿ ಪಿ.ವೈ.ಚೌಡಕಿ ವಂದಿಸಿದರು.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST