ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ನಗರದ ಬಸ್ ಡಿಪೋ ಹತ್ತಿರ ನೂತನವಾಗಿ ನಿರ್ಮಾಣಗೊಂಡಿರುವ ನಿಮಗಾಗಿ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ನ ಕಟ್ಟಡವನ್ನು ಶಾಸಕ ಅಶೋಕ ಮನಗೂಳಿ ಹಾಗೂ ಸಾರಂಗಮಠದ ಪ್ರಭುಸಾರಂಗದೇವ ಶಿವಾಚಾರ್ಯರು ಇತ್ತೀಚೆಗೆ ಉದ್ಘಾಟಿಸಿದರು. ಈ ಸಂಸ್ಥೆ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.
ಈ ವೇಳೆ ನಿಮಗಾಗಿ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರಾದ ರಾಘವೇಂದ್ರ ಜೋಶಿ, ಆಶೀಫ ಮೊಗಲಾಯಿ, ಸದಸ್ಯರಾದ ಮಲ್ಲು ಹಿರೋಳ್ಳಿ, ನಾನಾಗೌಡ ಬಿರಾದಾರ, ಪ್ರಕಾಶ ನೆಲ್ಲಗಿ, ಶರಣು ನೆಲ್ಲಗಿ, ಗಿರೀಶ ಶ್ರೀಗಿರಿ, ಕಲ್ಲಪ್ಪ ರಬಶೆಟ್ಟಿ, ಕಲಾವತಿ ಹದ್ನೂರ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.



