ಪ್ರಜಾಸ್ತ್ರ ಸುದ್ದಿ
ಸ್ಯಾಂಡಲ್ ವುಡ್ ನಟ ರಿಷಬ್(rishab shetty) ಶೆಟ್ಟಿಗೆ ಕಾಂತಾರ ಸಿನಿಮಾದಲ್ಲಿನ ನಟನೆಗಾಗಿ 2022ನೇ ಸಾಲಿನ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದೀಗ ರಿಷಬ್ ನೀಡಿದ ಹೇಳಿಕೆಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಮೆಟ್ರೋಸಾಗಾಗೆ ನೀಡಿದ ಸಂದರ್ಭದಲ್ಲಿ ಬಾಲಿವುಡ್ ನಲ್ಲಿ ಭಾರತವನ್ನು ಕೆಟ್ಟದಾಗಿ ತೋರಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಗೆಲ್ಲಲಾಗುತ್ತಿದೆ. ನನ್ನ ದೇಶ, ನನ್ನ ರಾಜ್ಯ, ನನ್ನ ಭಾಷೆ, ನನ್ನ ಹೆಮ್ಮೆ ಎಂದು ತೋರಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿರುವುದಕ್ಕೆ ಟೀಕೆ ವ್ಯಕ್ತವಾಗುತ್ತಿದೆ.
ನಟ ರಿಷಬ್ ಶೆಟ್ಟಿ ಬಾಲಿವುಡ್ ದ್ವೇಷಿ. ಕಾಂತಾರಾ ಚಿತ್ರದಲ್ಲಿ ನಟಿಯ ಸೊಂಟವನ್ನು ಚಿವುಟುವುದು ತೋರಿಸುವುದು, ನಕಾರಾತ್ಮಕ ಮಾತುಗಳನ್ನು ಆಡುವುದು ಶಾಶ್ವತವಾಗಿ ಉಳಿಯುತ್ತದೆ ಎಂದು ಟೀಕಿಸಲಾಗಿದೆ.
https://twitter.com/Chrissuccess/status/1825729000213258436



