LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಸ್ ಗಳ ಮುಖಾಮುಖಿ ಡಿಕ್ಕಿ, 40ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಪ್ರಜಾಸ್ತ್ರ ಸುದ್ದಿ

ಜೊಯಿಡಾ(Joida): ಎರಡು ಸಾರಿಗೆ ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ 40ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಗುರುವಾರ ಮುಂಜಾನೆ ನಡೆದಿದೆ. ತಾಲೂಕಿನ ಚಾಪೋಲಿ ಘಟ್ಟದಲ್ಲಿ ಈ ಅಪಘಾತ ಸಂಭವಿಸಿದೆ. ಉಳವಿಯಿಂದ ಇಚಲಕರಂಜಿಗೆ ಹೋಗುತ್ತಿದ್ದ ಬಸ್ ಹಾಗೂ ಬೆಳಗಾವಿಯಿಂದ ಅಂಕೋಲಕ್ಕೆ ಹೋರಟಿದ್ದ ಬಸ್ ನಡುವೆ ಈ ಘಟನೆ ನಡೆದಿದೆ.

ಗಾಯಾಳುಗಳಲ್ಲಿ ಕೆಲವರನ್ನು ಜೊಯಿಡಾ ತಾಲೂಕು ಆಸ್ಪತ್ರೆ, ಇನ್ನು ಕೆಲವರನ್ನು ಕಾರವಾರದ ಕಿಮ್ಸ್, ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಎರಡು ಬಸ್ ಸೇರಿ 150ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎನ್ನಲಾಗುತ್ತಿದೆ.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST