LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಿಂದಗಿ: ಖಾಯಂ ನೌಕರಿಗೆ ಆಗ್ರಹಿಸಿ ಪೌರಕಾರ್ಮಿಕರ ಪ್ರತಿಭಟನೆ

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಸರಿಯಾದ ವೇತನ ಹಾಗೂ ಖಾಯಂ ನೌಕರಿಗೆ ಆಗ್ರಹಿಸಿ ಸಿಂದಗಿ ನಗರಸಭೆ ಕಚೇರಿ ಮುಂದೆ ಮಹಿಳಾ ಪೌರಕಾರ್ಮಿಕರು ಬುಧವಾರ ಪ್ರತಿಭಟನೆ ನಡೆಸಿದರು. ಹಲವು ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿದ್ದೇವೆ. ನಮಗೆ ನೌಕರಿ ಖಾಯಂ ಮಾಡಬೇಕು ಎಂದು ಆಗ್ರಹಿಸಿದರು. ಒಂದು ವರ್ಷ ಕೆಲಸ ಮಾಡರಿ ನಿಮಗೆ ಕೆಲಸ ಖಾಯಂ ಮಾಡುತ್ತೇವೆ ಎಂದು ಹೇಳಿದ್ದಾರೆ. ಈಗ ನೋಡಿದರೆ ಎರಡು ತಿಂಗಳಲ್ಲಿಯೇ ಕೆಲಸದಿಂದ ಬಿಡಿಸುತ್ತಿದ್ದಾರೆ. ಒಂದು ವೇಳೆ ನೇಮಕಾತಿ ಮಾಡಿಕೊಂಡರೆ ಇಷ್ಟು ವರ್ಷ ದುಡಿದ ನಮ್ಮನ್ನೇ ನೇಮಕಾತಿ ಮಾಡಿಕೊಳ್ಳುತ್ತಾರೆ ಅನ್ನೋ ಭರವಸೆ ಇಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಪೌರಾಯುಕ್ತ ಎಸ್.ರಾಜಶೇಖರ, ನೇರವಾಗಿ ನಮಗೆ ತೆಗೆದುಕೊಳ್ಳಲು ಅವಕಾಶವಿಲ್ಲ. ಪುರಸಭೆಯಿಂದ ನಗರಸಭೆಯಾಗಿರುವುದರಿಂದ ಸರ್ಕಾರದಿಂದ ಆದೇಶವಾಗಬೇಕು. ಜಿಲ್ಲಾಧಿಕಾರಿಗಳು ನೋಟಿಫಿಕೇಷನ್ ಹೊರಡಿಸುತ್ತಾರೆ ಅಂತಾ ಹೇಳಿದ್ದಾರೆ. ಈ ಮೂಲಕ ಹರಕೆ ಉತ್ತರ ಕೊಟ್ಟು ಜಾರಿಕೊಂಡಿದ್ದಾರೆ ಹೊರತು ಅವರ ಕೆಲಸದ ಹಿರಿತನದ ಮೇಲೆ ನೇಮಕಾತಿ ಮಾಡಿಕೊಳ್ಳುವ ಭರವಸೆ ಸಹ ನೀಡುತ್ತಿಲ್ಲ ಎಂದು ಪೌರಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST