LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಿಂದಗಿ: ಜ್ಞಾನದೇಗುಲದಲ್ಲಿ ಇಸ್ಪೀಟ್ ಆಟ

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ತಾಲೂಕಿನ ಬಂದಾಳ ಗ್ರಾಮದಲ್ಲಿರುವ ಸರ್ಕಾರಿ ಉರ್ದು ಕಿರಿಯ ಗಂಡು ಮಕ್ಕಳ ಶಾಲೆಯ ಬೀಗ ಮುರಿದು ಮದ್ಯ ಸೇವನೆ ಮಾಡಿ ಇಸ್ಪೀಟ್ ಆಟ ಆಡಿದ್ದಾರೆ. ಮುಂಜಾನೆ ಶಿಕ್ಷಕರು ಶಾಲೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕಿಡಿಗೇಡಿಗಳ ವರ್ತನೆಯಿಂದ ಶಿಕ್ಷಕರು, ಗ್ರಾಮಸ್ಥರಲ್ಲಿ ಬೇಸರ ಮೂಡಿಸಿದೆ.

ಶಾಲೆಯ ಕೊಠಡಿಯೊಂದರ ಬೀಗ ಮುರಿದಿದ್ದಾರೆ. ಅಕ್ರಮವಾಗಿ ಒಳಗೆ ಪ್ರವೇಶ ಮಾಡಿ ಮದ್ಯ ಸೇವನೆ ಮಾಡಿ, ಇಸ್ಪೀಟ್ ಆಡಿದ್ದಾರೆ. ಮದ್ಯದ ಬಾಟಲ್ ಗಳನ್ನು, ಇಸ್ಪೀಟ್ ಕಾರ್ಡ್ ಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಈ ಹಿಂದೆ ಶಾಲೆಯಲ್ಲಿನ ಸಿಲಿಂಡರ್ ಕಳ್ಳತನ ಮಾಡಲಾಗಿದೆ. ಕೆಲವೊಂದು ಸಾಮಗ್ರಿಗಳನ್ನು ಕಳ್ಳತನ ಮಾಡಲಾಗಿದೆ. ಈಗ ಮತ್ತೆ ಅನೈತಿಕ ಚಟುವಟಿಕೆ ನಡೆಸಲಾಗಿದೆ. ಹೀಗಾಗಿ ಶಾಲೆಯ ಮುಖ್ಯಸ್ಥರು ಹಾಗೂ ಎಸ್ ಡಿಎಂಸಿ ಅಧ್ಯಕ್ಷರು ಸಿಂದಗಿ ಪೊಲೀಸ್ ಠಾಣೆಗ ಲಿಖಿತ ದೂರು ನೀಡಿದ್ದಾರೆ.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST