LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಅ.18ರ ತನಕ ಶಾಲೆಗಳಿಗೆ ರಜೆ ವಿಸ್ತರಣೆ

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಶಿಕ್ಷಕರು ಭಾಗವಹಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಎಲ್ಲ ಶಾಲೆಗಳಿಗೆ ಅಕ್ಟೋಬರ್ 18ರ ತನಕ ರಜೆ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ. ಹೀಗಾಗಿ ಸರ್ಕಾರಿ, ಅನುದಾನಿತ ಶಾಲೆಗಳಿಗೆ ಅಕ್ಟೋಬರ್ 18ರ ತನಕ ರಜೆ ವಿಸ್ತರಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೆಪ್ಟೆಂಬರ್ 22ರಂದು ರಾಜ್ಯದಲ್ಲಿ ಸಮೀಕ್ಷೆ ಪ್ರಾರಂಭಿಸಲಾಗಿದೆ. ನಿಗದಿತ ಸಮಯದಂತೆ ಸಮೀಕ್ಷೆ ಅಕ್ಟೋಬರ್ 8ಕ್ಕೆ ಮುಗಿಯಬೇಕು. ಆದರೆ, ರಾಜ್ಯದಲ್ಲಿ ನಮ್ಮ ನಿರೀಕ್ಷೆಯಂತೆ ಇನ್ನು ಸಮೀಕ್ಷೆಯಾಗಿಲ್ಲ. ಕೊಪ್ಪಳ ಶೇಕಡ 97, ದಕ್ಷಿಣ ಕನ್ನಡ ಶೇಕಡ 63ರಷ್ಟು ಆಗಿದೆ. ಹೀಗಾಗಿ ಶಿಕ್ಷಕರ ಸಂಘಟನೆಯ ಮನವಿ ಮೇರೆಗೆ 8 ದಿನಗಳ ಕಾಲ ರಜೆಯನ್ನು ಘೋಷಿಸಲಾಗಿದೆ ಎಂದರು.

ಸಮೀಕ್ಷೆ ಕಾರ್ಯದ ಸಂದರ್ಭದಲ್ಲಿ ಮೂವರು ಸಿಬ್ಬಂದಿ ಮೃತಪಟ್ಟಿದ್ದಾರೆ. ಅವರ ಕುಟುಂಬಸ್ಥರಿಗೆ ತಲಾ 20 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಅಕ್ಟೋಬರ್ 19ರೊಳಗೆ ಸಮೀಕ್ಷೆ ಪೂರ್ಣಗೊಳಿಸಲು ಸೂಚಿಸಿದ್ದೇವೆ ಅಂತಾ ಹೇಳಿದರು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST