LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮೈಸೂರು: ಮರಕ್ಕೆ ಕಾರು ಡಿಕ್ಕಿ, ಇಬ್ಬರ ಸಾವು

ಪ್ರಜಾಸ್ತ್ರ ಸುದ್ದಿ

ಮೈಸೂರು(Mysore): ಚಾಲಕನ ನಿಯಂತ್ರಣ ತಪ್ಪಿ ಓಮಿನಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟು, ಓರ್ವನಿಗೆ ಗಾಯವಾದ ಘಟನೆ ಸಾಲಿಗ್ರಾಮ ತಾಲೂಕಿನ ಬೈಲಾಪುರ ಗ್ರಾಮದ ಹತ್ತಿರ ನಡೆದಿದೆ. ಹಾಸನದ ಲಕ್ಷ್ಮೀಪುರಂ ಬಡಾವಣೆಯ ಖಲೀಮ್ ರೆಹಮಾನ್(65), ಶೇಖ್ ಅಬ್ದುಲ್ ಖಾದರ್(45) ಮೃತ ದುರ್ದೈವಿಗಳು. ಶೇಖ್ ಮುನೀರ್ ಅಹಮ್ಮದ್ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಾಸನದಿಂದ ಚುಂಚನಕಟ್ಟೆ ಕಡೆ ಇವರ ಹೊರಟಿದ್ದರು. ಬೈಲಾಪುರ ಹತ್ತಿರ ಪೈಪ್ ಹಾಕುವ ಸಲುವಾಗಿ ರಸ್ತೆ ಅಗೆಯಲಾಗಿತ್ತು. ಆದರೆ, ಅದನ್ನು ಮುಚ್ಚಿರಲಿಲ್ಲ. ಈ ಸ್ಥಳದಲ್ಲಿ ಓಮಿನಿ ಕಾರು ಚಾಲಕನ ನಿಯಂತ್ರಣಕ್ಕೆ ಸಿಗದೆ ಮರಕ್ಕೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST