LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಏನಿದು ಸಿಂದಗಿಯಲ್ಲಿನ ಶಿಕ್ಷಣ ಸಂಸ್ಥೆಗಳ ಕಳ್ಳಾಟ?

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಕಳ್ಳಾಟ ಜೋರಾಗಿದೆ. ಬಹುತೇಕ ಶಿಕ್ಷಣ ಸಂಸ್ಥೆಗಳಿಗೆ ಆಟದ ಮೈದಾನವೇ ಇಲ್ಲ. ವಸತಿ ನಿಲಯ ಹೊಂದಿರುವ ಶಾಲೆಗಳಲ್ಲಿ ಸೂಕ್ತವಾದ ಶೌಚಾಲಯದ ವ್ಯವಸ್ಥೆಯಿಲ್ಲ. ವಿದ್ಯಾರ್ಥಿಗಳನ್ನು ಬಯಲು ಶೌಚಾಲಯಕ್ಕೆ ಕಳುಹಿಸುತ್ತಿದ್ದಾರೆ. ಅಡುಗೆ ಕೋಣೆ ಪರಿಸ್ಥಿತಿ ಹಾಗೂ ಆಹಾರದ ಗುಣಮಟ್ಟವು ಕಳಪೆಯಾಗಿದೆ ಎನ್ನುವ ಆರೋಪವಿದೆ. ಇದೀಗ ಖಾಸಗಿ ಶಿಕ್ಷಣ ಸಂಸ್ಥೆಗಳು ಹೊಂದಿರುವ ಶಾಲಾ ವಾಹನಗಳಿಗೆ ಇನ್ಸೂರೆನ್ಸ್(Vehicle Insurance) ಪಾವತಿಸದೆ ಹಾಗೇ ವಾಹನ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ಒಂದು ವರ್ಷ, ಆರು ತಿಂಗಳು ಹೀಗೆ ಒಂದೊಂದು ಶಾಲೆಯದ್ದು ಒಂದೊಂದು ಕಥೆಯಿದೆ. ಮಂಗಳವಾರ ಆರ್ ಟಿಒ(RTO) ಅಧಿಕಾರಿಗಳು ಪಟ್ಟಣದಲ್ಲಿನ ಪ್ರತಿಷ್ಠಿತ ಸುಮಾರು ಮೂರ್ನಾಲ್ಕು ಶಿಕ್ಷಣ ಸಂಸ್ಥೆಗಳ ವಾಹನಗಳನ್ನು ಹಿಡಿದು ಪ್ರಕರಣ ದಾಖಲಿಸಿದ್ದಾರೆ. ಇನ್ಸೂರೆನ್ಸ್, ಎಫ್ ಸಿ ಸೇರಿದಂತೆ ಹಲವು ಕಾರಣಗಳಿಗೆ ವಾಹನಗಳನ್ನು ಹಿಡಿದು ಪ್ರಕರಣ ದಾಖಲಿಸಿದ್ದು, ದಂಡ ಪಾವತಿಸಿದ ಬಳಿಕ ಮರಳಿ ಪಡೆಯಿರಿ ಎಂದು ಸಿಂದಗಿ ಪೊಲೀಸ್ ಠಾಣೆಯಲ್ಲಿ ವಾಹನಗಳನ್ನು ನಿಲ್ಲಿಸಲಾಗಿದೆ. ಒಂದೆರಡು ಶಾಲೆಯವರು ದಂಡ ಪಾವತಿಸಿ ವಾಹನಗಳನ್ನು ಪಡೆದಿರೆ, ಇನ್ನು ಎರಡು ವಾಹನಗಳು ಪೊಲೀಸ್ ಠಾಣೆ ಆವರಣದಲ್ಲಿಯೇ ನಿಂತಿವೆ.

ಸಿಂದಗಿಯಲ್ಲಿ ಮೊದಲೇ ಅತಿ ವೇಗವಾಗಿ ವಾಹನಗಳನ್ನು ಚಲಾಯಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದಾಗಿ ಸಣ್ಣಪುಟ್ಟ ಅಪಘಾತ ಪ್ರಕರಣಗಳು ಸಹ ನಡೆದಿವೆ. ಬಸ್ಸಿನಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುವುದು, ಅಸುರಕ್ಷಿತ ವಾಹನ ಚಾಲನೆ, ರಾಂಗ್ ರೂಟ್ ನಲ್ಲಿ ವಾಹನ ಚಲಾಯಿಸುವುದು ಸೇರಿದಂತೆ ಹಲವು ದೂರುಗಳು ಕೇಳಿ ಬರುತ್ತಲೇ ಇವೆ. ಇದೀಗ ಇನ್ಸೂರೆನ್ಸ್ ಪಾವತಿಸದೆ ಗಾಡಿಗಳನ್ನು ಓಡಿಸುತ್ತಿರುವುದು ಬೆಳಕಿಗೆ ಬಂದಿದೆ. ಮಕ್ಕಳ ಸುರಕ್ಷತೆ ವಹಿಸಬೇಕಾದ ಶಿಕ್ಷಣ ಸಂಸ್ಥೆಗಳು ನಿಯಮಗಳನ್ನು ಮೀರಿ ನಡೆದುಕೊಳ್ಳುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆಯವರು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST