LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಲಾರಿ-ಟಾಟಾ ಸುಮೋ ಅಪಘಾತ: ಮೂವರ ಸಾವು

ಪ್ರಜಾಸ್ತ್ರ ಸುದ್ದಿ

ಚಿಕ್ಕಬಳ್ಳಾಪುರ(Chikkaballapura): ತಾಲೂಕಿನ ಸೆಟ್ ದಿನ್ನೇ ಗೇಟ್ ಹತ್ತಿರ ಇಂದು ಲಾರಿ ಹಾಗೂ ಟಾಟಾ ಸುಮೋ ನಡುವೆ ಭೀಕರ ಅಪಘಾತ(Accident) ಸಂಭವಿಸಿದೆ. ಈ ವೇಳೆ ಮೂವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ರಾಜಿಯಾ ಶಾಹಿನ್, ಮೋಲ್ಲಾನ್ ಶಾಹನ್, ಮೇಹಿಮುದಲ್ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರೆಲ್ಲರೂ ಬಿಹಾರ ಮೂಲದವರೆಂದು ತಿಳಿದು ಬಂದಿದೆ.

ಕೋಲಾರದ(Kolara) ದರ್ಗಾದಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಕುಟುಂಬ ಸಮೇತ ಪೆನುಗೊಂಡ ಕಡೆ ಹೊರಟ್ಟಿದ್ದರು. ಲಾರಿಯನ್ನು ಓವರ್ ಟೇಕ್ ಮಾಡಲು ಹೋದಾಗ ಅಪಘಾತ ನಡೆದಿದೆ ಎಂದು ಹೇಳಲಾಗುತ್ತಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕಟರಣ ದಾಖಲಿಸಿಕೊಂಡಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST