LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಧಾನ ಪರಿಷತ್ ಚುನಾವಣೆ ದಿನಾಂಕ ಪ್ರಕಟ

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಕರ್ನಾಟಕ ಹಾಗೂ ಬಿಹಾರ ವಿಧಾನ ಪರಿಷತ್ತಿನ ಚುನಾವಣೆಯ ವೇಳಾಪಟ್ಟಿಯನ್ನು ಮಂಗಳವಾರ ಚುನಾವಣಾ ಆಯೋಗ ಪ್ರಕಟಿಸಿದೆ. ಕರ್ನಾಟಕದ 7, ಬಿಹಾರದ 9 ಸ್ಥಾನಗಳಿಗೆ ಜೂನ್ 18ರಂದು ಮತದಾನ ನಡೆಯಲಿದೆ. ದ್ವೈವಾರ್ಷಿಕ ಅವಧಿಯ ಬಿಹಾರದ್ದು ಜೂನ್ 28, ಕರ್ನಾಟಕದ್ದು ಜೂನ್ 30ರಂದು ಮುಗಿಯಲಿದೆ.

ಜೂನ್ 1 ಅಧಿಸೂಚನೆ, ಜೂನ್ 8 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಜೂನ್ 9 ನಾಮಪತ್ರ ಪರಿಶೀಲನೆ, ಜೂನ್ 11 ನಾಮಪತ್ರ ಹಿಂದಕ್ಕೆ ಪಡೆಯುವ ದಿನ. ಜೂನ್ 18 ಮತದಾನ ಹಾಗೂ ಫಲಿತಾಂಶ ಪ್ರಕಟವಾಗಲಿದೆ.

ಬಿ.ಕೆ ಹರಿಪ್ರಸಾದ್, ಪ್ರತಾಪ ಸಿಂಹ ನಾಯಕ.ಕೆ, ನಾಸೀರ್ ಅಹ್ಮದ್, ಸುನಿಲ್ ವಲ್ಯಾಪುರ, ಗೋವಿಂದ ರಾಜು, ಎನ್.ನಾಗರಾಜ ಹಾಗೂ ತಿಪ್ಪಣ್ಣಪ್ಪ ಅವರ ಅವಧಿಯು ಜೂನ್ 30ಕ್ಕೆ ಮುಗಿಯಲಿದೆ. ಇದರಲ್ಲಿ ಆಯಾ ಪಕ್ಷಗಳು ಯಾರಿಗೆ ಮತ್ತೊಮ್ಮೆ ಅವಕಾಶ ನೀಡುತ್ತವೆ, ಯಾರನ್ನು ಕೈ ಬಿಡುತ್ತವೆ ಅನ್ನೋದು ಶೀಘ್ರದಲ್ಲಿ ತಿಳಿಯಲಿದೆ.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST