LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಜಯಪುರ: 302.240 ಕೆಜಿ ಮಾದಕ ವಸ್ತು ನಾಶ

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಜಿಲ್ಲಾ ಪೊಲೀಸ್ ಅಧೀಕ್ಷಕರು 2023-24ನೇ ಸಾಲಿನಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಒಟ್ಟು 21 ಎನ್ ಡಿಪಿಎಸ್ ಪ್ರಕರಣಗಳಲ್ಲಿ ಜಪ್ತಿ ಮಾಡಲಾದ  18.432 ಕೆಜಿ ಅಫಿಮ್ ಡ್ರೈಡ್ ನಟ್ಸ್ ಪೌಡರ್, 283.808 ಕೆಜಿ ಗಾಂಜಾ ಪ್ಲಾಂಟ್ ಮತ್ತು ಪೌಡರ್ ಸೇರಿ ಒಟ್ಟು 302.240 ಕೆಜಿ ಮಾದಕ ವಸ್ತುಗಳ್ನು ವಶಪಡಿಸಿಕೊಳ್ಳಲಾಗಿತ್ತು.

ಇಷ್ಟೊಂದು ಪ್ರಮಾಣದ ಮಾದಕ ವಸ್ತುಗಳನ್ನು ಜನವರಿ 23ರಂದು ಮಹಾನಗರ ಪಾಲಿಕೆ ವ್ಯಾಪ್ತಿಯ ಇಂಡಿ ರಸ್ತೆಯ ಸೇರ್ವ ನಂಬರ್ 140ರ KPMP Trust, Bio medical waste disposal unit ನಲ್ಲಿ ಸುಟ್ಟು ನಾಶಗೊಳಿಸಲಾಯಿತು. ಈ ಸಂದರ್ಭದಲ್ಲಿ ಡ್ರಗ್ಸ್ ಡಿಸಪೋಸಲ್ ಕಮೀಟಿಯ ಚೇರಮನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಸಮಿತಿ ಸದಸ್ಯ ಡಿಎಸ್‌ಪಿ ಬಸವರಾಜ ಯಲಿಗಾರ, ಇಂಡಿ ಡಿಎಸ್‌ಪಿ ಜಗದೀಶ್ ಎಚ್‌ಎಸ್, ಜಿಲ್ಲಾ ಪರಿಸರ ಅಧಿಕಾರಿ ವಿವೇಕ ಗುನಗಾ,  ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಡೆಪ್ಯೂಟಿ ಡೈರೆಕ್ಟರ್ ಆಫ್ ಪ್ಯಾಕ್ಟರಿಸ್ & ಬೋಯಿಲರ್‌ನ ಜಟಿಂಗರಾಯ ಹಾಗೂ ಇತರರು ಉಪಸ್ಥಿತರಿದ್ದರು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST