LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಜಯಪುರ: ಪ್ರಾಮಾಣಿಕತೆ ಮೆರೆದ ಬಸ್ ಚಾಲಕ, ನಿರ್ವಾಹಕ

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ವಿಜಯಪುರದಿಂದ ಮುಳಸಾವಳಗಿಗೆ ಹೊರಡುವ ವಿಜಯಪುರ ಘಟಕ-1ರ ಬಸ್ ಸಂಖ್ಯೆ ಕೆಎ28 ಎಫ್-1703ರಲ್ಲಿ ಪ್ರಯಾಣಿಕರೊಬ್ಬರು ಮರೆತು ಹೋದ ಲ್ಯಾಪ್‌ಟಾಪ್‌ನ್ನು(Laptop) ಚಾಲಕ(Driver) ಶೇಖರ ಬೋಗಂ ಹಾಗೂ ನಿರ್ವಾಹಕ ಗುಂಡೂರಾವ ರಾಠೋಡ ಅವರು ಪ್ರಯಾಣಿಕರಿಗೆ ಮರಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ವಿಜಯಪುರದಿಂದ ಮುಳಸಾವಳಗಿಗೆ ಪ್ರಯಾಣಿಸುತ್ತಿದ್ದ ನೂರಲಿಶಾ ಮಕಾಂದಾರ ಅವರು ಮುಳಸಾವಳಗಿಗೆ ಇಳಿಯುವ ಸಂದರ್ಭದಲ್ಲಿ ತಮ್ಮ 50 ಸಾವಿರ ರೂಪಾಯಿ ಬೆಲೆಬಾಳುವ ಲ್ಯಾಪ್ ಟಾಪ್ ಬಸ್ಸಿನಲ್ಲಿಯೇ(Bus) ಮರೆತು ಬಿಟ್ಟು ಹೋಗಿದ್ದರು. ಬಸ್ಸಿನ ಚಾಲಕ ಹಾಗೂ ನಿರ್ವಾಹಕರು ಲ್ಯಾಪ್ ಟಾಪ್‌ನ್ನು ಮೂಲ ಮಾಲೀಕರಿಗೆ ಒಪ್ಪಿಸುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ. ಇವರ ಕಾರ್ಯಕ್ಕೆ ನೂರಲಿಶಾ ಮಕಾಂದಾರ ಅವರು ಬಹುಮಾನ ನೀಡಲು ಮುಂದೆ ಹೋದಾಗ ನಯವಾಗಿ ತಿರಸ್ಕರಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಇವರ ಕಾರ್ಯಕ್ಕೆ ವಿವಿಧ ಸಾರ್ವಜನಿಕರು ಕೊಂಡಾಡಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST