LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

100ಕ್ಕೂ ಹೆಚ್ಚು ಜನರಿಗೆ 30 ಕೋಟಿ ಮೋಸ ಮಾಡಿ ಎಸ್ಕೇಪ್

ಪ್ರಜಾಸ್ತ್ರ ಸುದ್ದಿ

ತುಮಕೂರು(Tumakoru): ಸುಮಾರು 100ಕ್ಕೂ ಹೆಚ್ಚು ಜನರಿಗೆ ಮೋಸ ಮಾಡಿದ ಬರೋಬ್ಬರಿ 30 ಕೋಟಿ ರೂಪಾಯಿ ಸಮೇತ ಚಿನ್ನದಂಗಡಿ ವ್ಯಾಪಾರಿ ಪರಾರಿಯಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಆಕಾಶ ಜ್ಯುವೆಲರಿ ಅಂಗಡಿ ಮಾಲೀಕ ಶಿವಾನಂದಮೂರ್ತಿ ಎಂಬಾತ 30 ಕೋಟಿ ರೂಪಾಯಿ ಪಡೆದು ಕುಟುಂಬ ಸಮೇತ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಇತನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಯಾರೂ ಹಣ ನೀಡದಂತೆ ಸೊಸೈಟಿ ನಿರ್ದೇಶಕರೊಬ್ಬರು ಮನವಿ ಮಾಡಿದ್ದಾರೆ.

ಬಸ್ ನಿಲ್ದಾಣದ ಎದುರಿನ ಜಿಎಂಎಸ್ ಕಟ್ಟಡದಲ್ಲಿ ಚಿನ್ನದ ಅಂಗಡಿಯ ಜೊತೆಗೆ ಚೀಟಿ ವ್ಯವಹಾರ ಸಹ ಮಾಡುತ್ತಿದ್ದನಂತೆ. ಆಕಾಶ ಸಹಕಾರಿ ಕೋ ಆಪರೇಟಿವ್ ಸೊಸೈಟಿ ಶುರು ಮಾಡಿ ನೂರಾರು ಜನರಿಂದ ಶೇರ್ ಸಂಗ್ರಹಿಸಿದ್ದ. ಶೇರ್ ಹಣಕ್ಕೆ ಹೆಚ್ಚಿನ ಬಡ್ಡಿ ನೀಡುವುದಾಗಿ ಹೇಳಿ ಜನರಿಂದ ಹಣ ಪಡೆದು ಇದೀಗ ಪರಾರಿಯಾಗಿದ್ದಾನೆ. ಸೊಸೈಟಿ ಆಡಳಿತ ಮಂಡಳಿ ಶಿವಾನಂದಮೂರ್ತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST