LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕನ್ನಡ ಸಾಹಿತ್ಯ ಗೆಳೆಯರ ಬಳಗದಿಂದ ಹೆಚ್.ಟಿ ಕುಲಕರ್ಣಿ ಅವರಿಗೆ ಶ್ರದ್ಧಾಂಜಲಿ

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಕುಲಕರ್ಣಿ ಗುರುಗಳ ಸರಳ ಜೀವನ, ಶಿಸ್ತು, ಸೇವಾ ಮನೋಭಾವ ಮತ್ತು ಮೌಲ್ಯಾಧಾರಿತ ಬದುಕು ಎಲ್ಲರಿಗೂ ಮಾದರಿಯಾಗಿದೆ. ಅವರ ವ್ಯಕ್ತಿತ್ವ ಕಂಡು ಅನೇಕರು ಪ್ರೇರಣೆ ಪಡೆದಿದ್ದಾರೆ ಎಂದು ಭೀಮಾಶಂಕರ ಶ್ರೀಮಠದ ದತ್ತಪ್ಪಯ್ಯ ಮಹಾರಾಜರು ಹೇಳಿದರು. ಕನ್ನಡ ಸಾಹಿತ್ಯ ಗೆಳೆಯರ ಬಳಗದ ವತಿಯಿಂದ ಸೋಮವಾರ ಸಂಜೆ ನಗರದ ಬಸವ ಮಂಟಪದಲ್ಲಿ ಶಿಕ್ಷಕ ದಿ.ಹೆಚ್.ಟಿ.ಕುಲಕರ್ಣಿ ಅವರ ಶ್ರದ್ಧಾಂಜಲಿ ಸಭೆಯ ಸಾನಿಧ್ಯ ವಹಿಸಿ ಮಾತನಾಡಿ, ಇತ್ತೀಚಿಗೆ ನಮ್ಮನ್ನು ಅಗಲಿದ ಹೆಚ್.ಟಿ.ಕುಲಕರ್ಣಿ ಗುರುಗಳ ಬದುಕು ಹಾಗೂ ಅವರ ಆದರ್ಶಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಲಿ ಎಂದರು.

ಕನ್ನಡ ಸಾಹಿತ್ಯ ಗೆಳೆಯರ ಬಳಗದ ಅಧ್ಯಕ್ಷ ರಾಜಶೇಖರ ಕೂಚಬಾಳ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸಿಂದಗಿಯಲ್ಲಿ ಹೆಚ್.ಟಿ.ಕುಲಕರ್ಣಿ ಅವರ ಹೆಸರು ಅಜರಾಮರವಾಗಿ ಉಳಿಯಬೇಕು ಎನ್ನುವ ದಿಸೆಯಲ್ಲಿ ಅನೇಕರು ಗ್ರಂಥಾಲಯಕ್ಕೆ ಅವರ ಹೆಸರು ಇಡಬೇಕು ಎನ್ನುವ ವಿಚಾರ ವ್ಯಕ್ತಿಪಡಿಸುತ್ತಿದ್ದಾರೆ. ಅವರಲ್ಲಿ ನಾನು ಒಬ್ಬ. ಅವರ ಹೆಸರಿನ ಮೇಲೆ ಸ್ಮಾರಕ ಭವನ ನಿರ್ಮಿಸಬೇಕು ಎಂದು ಅವರ ಶಿಷ್ಯ ಬಳಗದಲ್ಲಿ ಚರ್ಚೆಯಾಗುತ್ತಿದೆ. ಆದಷ್ಟು ಬೇಗ ಶಾಸಕರು ಮುತುವರ್ಜಿ ವಹಿಸಿ ಸಭೆ ಕರೆದು ತೀರ್ಮಾನ ಕೈಗೊಳ್ಳಲಿ ಎಂದು ಮನವಿ ಮಾಡಿಕೊಂಡರು.

ಡಾ.ಪ್ರಕಾಶ ರಾಗರಂಜಿನಿ ಪ್ರಾರ್ಥಿಸಿದರು. ಸಿದ್ಧಲಿಂಗ ಚೌಧರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಅಶೋಕ ಬಿರಾದಾರ ನಿರೂಪಿಸಿದರು. ವೇದಿಕೆಯ ಮೇಲೆ ಡಾ.ರವಿ ಗೋಲಾ, ಅಶೋಕ ಅಲ್ಲಾಪುರ, ಆರ್.ಡಿ.ಕುಲಕರ್ಣಿ, ಅವದೂತ ಜೋಷಿ, ಮಲ್ಲಿಕಾರ್ಜುನ ಅರ್ಜುಣಗಿ, ಲಕ್ಷ್ಮಣ ಸೊನ್ನದ, ಕಾನಿಪ ಸಂಘದ ತಾಲೂಕಾಧ್ಯಕ್ಷ ಮಹಾಂತೇಶ ನೂಲಾನವರ, ಶೈಲಜಾ ಸ್ಥಾವರಮಠ, ಮೀನಾಕ್ಷಿ ವಾಘಮೋರೆ ಇದ್ದರು.

ಕಾರ್ಯಕ್ರಮದಲ್ಲಿ ಸುಕೃತಾ ದೇಸಾಯಿ, ಅಶೋಕ ಅಲ್ಲಾಪುರ, ಆರ್.ಡಿ.ಕುಲಕರ್ಣಿ, ರೇಖಾ ಕುಲಕರ್ಣಿ ನುಡಿ ನಮನ ಸಲ್ಲಿಸಿದರು. ಈ ವೇಳೆ ಕನ್ನಡ ಸಾಹಿತ್ಯ ಗೆಳೆಯರ ಬಳಗ, ಸಂಗಮೇಶ್ವರ, ಲೀಟಲ್ ವಿಂಗ್ಸ್ ಹಾಗೂ ಶ್ರೀ ಸದ್ಗುರು ಕೋಚಿಂಗ್ ತರಗತಿಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ ನೂರಾರು ದೀಪಗಳನ್ನು ಬೆಳಗಿಸಿ ಮೌನಾಚರಣೆ ನಡೆಸುವ ಮೂಲಕ ಗೌರವ ನಮನ ಸಲ್ಲಿಸಲಾಯಿತು.

ತಾಲೂಕಿನಲ್ಲಿ ಗಣಿತ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸುವ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ತಮ್ಮ ತಂದೆ, ದಿ.ಹೆಚ್.ಟಿ.ಕುಲಕರ್ಣಿ ಗುರುಗಳ ಸ್ಮರಣಾರ್ಥ ಪ್ರತಿವರ್ಷ ಕಿರು ಕಾಣಿಕೆ ನೀಡಿ ಗೌರವಿಸಲಾಗುವುದು ಎಂದು ಅವರ ಪುತ್ರ ಪವನ.ಹೆಚ್.ಕುಲಕರ್ಣಿ ತಿಳಿಸಿದರು. ಸಂಗೀತ ಶಿಕ್ಷಕ ಎಂ.ಬಿ.ಅಲ್ದಿ, ಭಾಗ್ಯ ಬಬಲೇಶ್ವರ, ಡಾ.ಪ್ರಶಾಂತ ಬಮ್ಮಣ್ಣಿ, ಪೂಜಾ ಹಿರೇಮಠ, ರೇಖಾ ಕುಲಕರ್ಣಿ, ಸೈನಾಬಿ ಮಸಳಿ, ಶಕುಂತಲಾ ಹಿರೇಮಠ, ಮುತ್ತುರಾಜ ಬ್ಯಾಕೋಡ ಅವರಿಂದ ಗೀತ ನಮನ ಜರುಗಿತು.

ನುಡಿ ನಮನ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಅಲ್ಲಾಪುರ, ಡಾ.ಮಹಾಂತೇಶ ಹಿರೇಮಠ, ಶೋಭಾ ಚಿಗರಿ, ಡಾ.ಶರಣಬಸವ ಜೋಗುರ, ಬಸವರಾಜ ಅಗಸರ, ರಾಜು ಬಿರಾದಾರ, ಮಲ್ಲು ದೇಶಟ್ಟಿ, ಸುನಂದಾ ಯಂಪುರೆ, ನೀಲಮ್ಮ ಯಡ್ರಾಮಿ, ಎಸ್.ಡಿ.ಕುಲಕರ್ಣಿ, ಸಂತೋಷ ಬಂದೆ, ಜಗದೀಶ ಪಟ್ಟಣಶೆಟ್ಟಿ, ಪ್ರಶಾಂತ ಪಟ್ಟಣಶೆಟ್ಟಿ, ಗುರುನಾಥ ಅರಳಗುಂಡಗಿ, ಮೌಲಾಲಿ ಆಲಗೂರ, ಎಸ್.ಎಸ್.ಸಾತಿಹಾಳ ಸೇರಿದಂತೆ ಕುಲಕರ್ಣಿ ಗುರುಗಳ ಶಿಷ್ಯರು, ಅನುಯಾಯಿಗಳು ಇದ್ದರು.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST