LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಂಗಳೂರು: ಹೆಣ್ಣು ಶಿಶು ಹತ್ಯೆ ಮಾಡಿ ಶೌಚಾಲಯದಲ್ಲಿ ಬಿಸಾಕಿದರು

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ನಿಜಕ್ಕೂ ಇದು ಅತ್ಯಂತ ಅಮಾನವೀಯ ಹಾಗೂ ನೋವಿನ ಸಂಗತಿಯಾಗಿದೆ. ಹಣ್ಣು ಶಿಶುವನ್ನು ಹತ್ಯೆ ಮಾಡಿ ಶೌಚಾಲಯದಲ್ಲಿ ಬಿಸಾಕಿದ ಘಟನೆ  ದೇವನಹಳ್ಳಿ ತಾಲೂಕಿನ ಬೀರಸಂದ್ರ ಹತ್ತಿರದ ಫಾಕ್ಸ್ ಕಾನ್ ಕಾರ್ಖಾನೆಯಲ್ಲಿ ನಡೆದಿದೆ. ಮಹಿಳಾ ಶೌಚಾಲಯದಲ್ಲಿ ಬುಧವಾರ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ.

ಶಿಶುವಿನ ಕತ್ತು ಕತ್ತರಿಸಿ ಬಿಸಾಕಲಾಗಿದೆ. ಶೌಚಾಲಯದ ನೀರು ಹೋಗುವ ಜಾಗದಲ್ಲಿ ಮೃತದೇಹ ಪತ್ತೆಯಾಗಿದೆ. ಕಾರ್ಖಾನೆ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಶ್ವನಾಥಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 19 ವರ್ಷದ ಅವಿವಾಹಿತ ಯುವತಿ ಈ ಕೃತ್ಯವೆಸಗಿದ್ದಾಳೆ ಎನ್ನಲಾಗುತ್ತಿದೆ. ಏಪ್ರಿಲ್ 21ರ ರಾತ್ರಿ ಶೌಚಾಲಯದ ನೀರುವ ಹೋಗುವ ಕೊಳವೆ ಕೆಟ್ಟಿರುವುದು ಗಮನಕ್ಕೆ ಬಂದಿದೆ. ಆದ್ರೆ, ಸಿಬ್ಬಂದಿ ಕೆಲಸದ ಸಮಯ ಮುಗಿದಿದ್ದರಿಂದ ಮರುದಿನ ಮುಂಜಾನೆ ರಿಪೇರಿ ಮಾಡಲು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.

ಫಾಕ್ಸ್ ಕಾನ್ ಕಾರ್ಖಾನೆ ಮೊಬೈಲ್ ತಯಾರಿಕ ಘಟಕವಾಗಿದೆ. ಇಲ್ಲಿ 25 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಾರೆ. ಯುವತಿ ಇಲ್ಲಿಯೇ ವಾಸವಾಗಿದ್ದಾಳೆ. ಹೆರಿಗೆ ಬಳಿಕ ಚಿಕಿತ್ಸೆ ಪಡೆದಿರಲಿಲ್ಲ. ಇದರಿಂದಾಗಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಆಗ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಆಕೆ ಚೇತರಿಸಿಕೊಂಡ ಬಳಿಕ ಮಾಹಿತಿ ಪಡೆಯಲಾಗುವುದು ಎಂದಿರುವ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST